ಗಾಜಾ ಕದನ : 4 ದಿನ ಕದನ ವಿರಾಮ ಘೋಷಣೆ

ಗಾಜಾ: ಆರು ವಾರಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧಕ್ಕೆ ಮೊದಲ ಬಾರಿಗೆ ಅಲ್ಪ ವಿರಾಮ ದೊರೆತಿದೆ. ನಾಲ್ಕು ದಿನಗಳ ಕದನ ವಿರಾಮವನ್ನು ಇಸ್ರೇಲ್‌ ಅನುಮೋದಿಸಿದೆ.

 

ಇಸ್ರೇಲ್‌ ಮೊದಲ ಕದನವಿರಾಮ ಘೋಷಿಸಿದ್ದು, ಅದಕ್ಕೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಆದರೆ ಇದು ಯುದ್ಧದ ಅಂತ್ಯವಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಯುದ್ಧ ಕ್ಯಾಬಿನೆಟ್ ಕದನ ವಿರಾಮದ ಒಪ್ಪಂದದ ಮೇಲೆ ಮತ ಹಾಕುವ ಮೊದಲು ಹೇಳಿದರು. ಹಮಾಸ್ ನಿರ್ಮೂಲನೆಯಾಗುವವರೆಗೆ ಮತ್ತು ಒತ್ತೆಯಾಳುಗಳೆಲ್ಲರನ್ನು ಬಿಡುಗಡೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ನೆತನ್ಯಾಹು ಹೇಳಿದರು.

ಇದು ಈಗ ನಡೆಯುತ್ತಿರುವ ಕದನದಲ್ಲಿ ಮೊದಲ ವಿರಾಮವಾಗಿದ್ದು. ಈ ನಿಲುಗಡೆಯಿಂದಾಗಿ ಮಾನವೀಯ ನೆರವು ಕೂಡ ಗಾಜಾಕ್ಕೆ ಪ್ರವೇಶ ಪಡೆಯುತ್ತದೆ. ನಾಲ್ಕು ದಿನಗಳ ನಿಲುಗಡೆಗೆ ಪ್ರತಿಯಾಗಿ 50 ಮಹಿಳೆಯರು ಮತ್ತು ಮಕ್ಕಳನ್ನು ಹಮಾಸ್ ಮುಕ್ತಗೊಳಿಸಲಿದೆ. ಬಿಡುಗಡೆಯಾದ ಪ್ರತಿ 10 ಒತ್ತೆಯಾಳುಗಳಿಗೆ ಹೆಚ್ಚುವರಿ ಒಂದು ದಿನದ ವಿರಾಮವನ್ನು ವಿಸ್ತರಿಸುವುದಾಗಿ ಇಸ್ರೇಲಿ ಸರ್ಕಾರ ಹೇಳಿದೆ. ಗಾಜಾದ ಅಧಿಕಾರಿಗಳ ಪ್ರಕಾರ ಆರು ವಾರಗಳಿಂದ ಇಸ್ರೇಲ್‌ ನಡೆಸಿದ ದಾಳಿಯಿಂದಾಗಿ 30 ಲಕ್ಷ ಜನ ನಿರಾಶ್ರಿತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Comments (0)
Add Comment