ಗೂಗಲ್‌ನಲ್ಲಿ ಕೆಲಸದ ಸಂಸ್ಕೃತಿ ಸವೆದಿದೆ : ಮಾಜಿ ಉದ್ಯೋಗಿಯ ಆರೋಪಗೂಗಲ್‌ನಲ್ಲಿ ಕೆಲಸದ ಸಂಸ್ಕೃತಿ ಸವೆದಿದೆ : ಮಾಜಿ ಉದ್ಯೋಗಿಯ ಆರೋಪ

ನವದೆಹಲಿ: ಸಾಫ್ಟ್‌ವೇರ್ ಉದ್ಯಮದಲ್ಲೇ ಗೂಗಲ್ ಅನ್ನು ದೈತ್ಯ ಕಂಪನಿ ಹೆಸರಿಸಲಾಗುತ್ತೆ. ತನ್ನ ಉದ್ಯೋಗಿಗಳಿಗೆ ನೀಡುವ ದೊಡ್ಡ‌ ಮೊತ್ತದ ಸಂಬಳ ಮತ್ತು ಸೌಲಭ್ಯಗಳಿಗೆ ಖ್ಯಾತಿ ಹೊಂದಿದೆ. ಆದ್ರೆ ಗೂಗಲ್‌ನ ಮಾಜಿ ಉದ್ಯೋಗಿಯೊಬ್ಬರು ಈ ಸಂಸ್ಥೆಯ ಬಗ್ಗೆ ಹಾಗೂ ಸಿ‌ಇಒ ಸುಂದರ್ ಪಿಚೈ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಿತರಾಗಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಅವರು ‘ಗೂಗಲ್‌ನಲ್ಲಿ ಕೆಲಸದ ಸಂಸ್ಕೃತಿ ಸವೆದಿದೆ ಎಂದು ದೂರಿದ್ದಾರೆ. “ನಾನು ಅಕ್ಟೋಬರ್ 2005ರಲ್ಲಿ ಗೂಗಲ್‌ಗೆ ಸೇರಿಕೊಂಡೆ. ಅಲ್ಲಿ 18 ವರ್ಷಗಳ ಸೇವೆ ನಂತರ ನನ್ನ ರಾಜೀನಾಮೆಯನ್ನು ಗೂಗಲ್‌ಗೆ ನೀಡಿದ್ದೇನೆ. ಕಳೆದ ವಾರ ಗೂಗಲ್‌ನಲ್ಲಿ ನನ್ನ ಕೊನೆಯ ವಾರವಾಗಿತ್ತು” ಎಂದು ಅವರು ಬ್ಲಾಗ್‌ನ ಆರಂಭದಲ್ಲಿ ಬರೆದಿದ್ದಾರೆ. ಗೂಗಲ್ ತನ್ನ ಬಳಕೆದಾರರಿಗೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕಾಗಿ ಸರಿಯಾದ ಕೆಲಸವನ್ನು ಮಾಡುವ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಕಂಪನಿಯಾಗಿದೆ. ಪ್ರಪಂಚದ ಮಾಹಿತಿಯನ್ನು ಸಂಘಟಿಸುವ ಮತ್ತು ಅದನ್ನು ಸಾರ್ವತ್ರಿಕವಾಗಿ ಉಪಯುಕ್ತವಾಗಿಸುವ ಕಂಪನಿಯ ಧ್ಯೇಯಕ್ಕೆ ಗೂಗಲ್‌ನ ಉದ್ಯೋಗಿಗಳು ಹೇಗೆ ಬದ್ಧರಾಗಿದ್ದಾರೆ ಎಂಬುದನ್ನು ಜನತೆ ನೇರವಾಗಿ ನೋಡಿದ್ದಾರೆ ಎಂದು ಅವರು ಹೇಳಿದರು. ಕಾಲಾನಂತರದಲ್ಲಿ, ಟೆಕ್ ದೈತ್ಯ ಗೂಗಲ್‌ನಲ್ಲಿ ಕೆಲಸದ ಸಂಸ್ಕೃತಿಯು “ಸವೆಯಲು” ಪ್ರಾರಂಭವಾಗಿದೆ. ಉದಾಹರಣೆಗೆ, ಬಳಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಒಮ್ಮೆ ಮಾಡಿದ ನಿರ್ಧಾರಗಳನ್ನು ಲಾಭವನ್ನು ಹೆಚ್ಚಿಸುವ ಗುರಿಯೊಂದಿಗೆ ಬದಲಾಯಿಸಲಾಗುತ್ತಿದೆ ಎಂದು ಮಾಜಿ ಉದ್ಯೋಗಿ ದೂರಿದ್ದಾರೆ. ಒಂದು ಕಾಲದಲ್ಲಿ ಗೂಗಲ್ ಸಂಸ್ಕೃತಿಯ ವಿಶಿಷ್ಟ ಲಕ್ಷಣವಾಗಿದ್ದ ಪಾರದರ್ಶಕತೆ ಆವಿಯಾಗತೊಡಗಿದೆ. ಸುಂದರ್ ಪಿಚೈ ಅವರ ನಿರ್ದೇಶನದ ಅಡಿಯಲ್ಲಿ ಕಂಪನಿಯ ನಾಯಕತ್ವವು ಹಿರಿಯ ಉದ್ಯೋಗಿಗಳೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದರೊಂದಿಗೆ ಗೂಗಲ್‌ನಲ್ಲಿ ಉದ್ಯೋಗಿಳ ವಜಾ ಪ್ರಕ್ರಿಯೆ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments (0)
Add Comment