ಗೂಢಾಚಾರ ಆರೋಪ: ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ರದ್ದುಗೊಳಿಸಿದ ಕತಾರ್ ಕೋರ್ಟ್

ಕತಾರ್: ಗೂಢಾಚಾರ ಆರೋಪದಡಿಯಲ್ಲಿ ಭಾರತೀಯ ಎಂಟು ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿತ್ತು.ಆದರೆ ಆ ಗಲ್ಲುಶಿಕ್ಷೆಯು ಈಗ ರದ್ದು ಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕತಾರ್ ಕೋರ್ಟ್ ಶಿಕ್ಷೆಯ ಪ್ರಮಾಣವನ್ನೂ ಕಡಿಮೆಗೊಳಿಸಿದೆ ಎಂದು ವಿದೇಶಾಂಗ ಸಚಿವಾಲಯದ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದುಬೈನಲ್ಲಿ ನಡೆದ CoP28 ಶೃಂಗಸಭೆಯ ಬದಿಯಲ್ಲಿ ಕತಾರ್ ಆಡಳಿತಗಾರ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಭೇಟಿಯಾದ ಕೆಲ ವಾರಗಳ ನಂತರ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ.

ಕ್ಯಾಪ್ಟನ್ಗಳಾದ ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ, ಸೌರಭ್ ವಸಿಷ್ಟ್, ಕಮಾಂಡರ್ ಗಳಾದ ಅಮಿತ್ ನಾಗ್ಪಾಲ್, ಪೂರ್ಣೇದ್ರು ತಿವಾರಿ, ಸುಗುಣಾಕರ್ ಪಾಲಕಾ, ಸಂಜೀವ್ ಗುಪ್ತಾ, ಹಾಗೂ ರಾಗೇಶ್ ಗೋಪಕುಮಾರ್ ಮರಣದಂಡನೆಗೆ ಗುರಿಯಾಗಿದ್ದ ಅಧಿಕಾರಿಗಳಾಗಿದ್ದಾರೆ.

ಮುಂದಿನ ಕ್ರಮಗಳನ್ನು ನಿರ್ಧರಿಸಲು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಭಾರತ ಸರ್ಕಾರ ಹೇಳಿದೆ.

Comments (0)
Add Comment