ಗ್ರಾಹಕರಿಗೆ ಶಾಕ್ : ಎಲ್​​ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ

ಪಂಚರಾಜ್ಯಗಳ ಎಲೆಕ್ಷನ್‌ ಮುಗಿದ ಬೆನ್ನಲ್ಲೇ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 21 ರೂಪಾಯಿ ಏರಿಕೆಯಾಗಿದೆ. ಪರಿಷ್ಕೃತ ದರವು ಇಂದಿನಿಂದಲೇ ಜಾರಿಯಾಗುತ್ತಿದೆ. 19 ಕೆಜಿ ಎಲ್.ಪಿ.ಜಿ ಸಿಲಿಂಡರ್ ದರವನ್ನು ತೈಲ ಕಂಪನಿಗಳು ಏರಿಸಿವೆ. ನವದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ 1,796 ರೂಪಾಯಿಗೆ ಏರಿಕೆ ಆಗಿದೆ. ಮುಂಬೈನಲ್ಲಿ 1,749 ರೂಪಾಯಿಗೆ ಏರಿಕೆಯಾದರೆ, ಚೆನ್ನೈನಲ್ಲಿ 1,968.5 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಕೋಲ್ಕತ್ತಾದಲ್ಲಿ 1,908 ರೂಪಾಯಿಗೆ ಏರಿಕೆ ಆಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸತತ ಎರನೇ ಬಾರಿಗೆ ಎಲ್​ಪಿಜಿ ಕಮರ್ಷಿಯಲ್ ಸಿಲಿಂಡರ್​ ಬೆಲೆ ಏರಿಕೆ ಕಂಡಿದೆ.

Comments (0)
Add Comment