ಗ್ವಾದಾರ್ ಬಂದರಿನಲ್ಲಿ ಬಾಂಬ್ ದಾಳಿ: ಪಾಕಿಸ್ಥಾನ ಸೇನೆಯಿಂದ 7ಮಂದಿ ದಾಳಿಕೋರ ಹತ್ಯೆ

ಇಸ್ಲಮಾಬಾದ್‌: ಪಾಕಿಸ್ಥಾನದ ಗ್ವಾದಾರ್ ಬಂದರಿನ ಸರಕಾರಿ ಕಟ್ಟಡ ಸಂಕೀರ್ಣದ ಮೇಲೆ ಬಲೂಚಿಸ್ಥಾನ ಪ್ರತ್ಯೇಕತಾವಾದಿ ಉಗ್ರರು ಬಾಂಬ್‌ ದಾಳಿ ನಡೆಸಿದ್ದಾರೆ. ಬುಧವಾರ ಸರಣಿ ಬಾಂಬ್ ದಾಳಿ ನಡೆಸಿದ್ದಾರೆ.

ಈ ವೇಳೆ ಸೇನೆ ಹಾಗೂ ಆಕ್ರಮಣ ಕೋರರ ನಡುವೆ ಗುಂಡಿನ ಚಕಮಕಿ ನಡೆದು, ಸೇನೆಯು 7 ಜನ ದಾಳಿಕೋರರನ್ನು ಹತ್ಯೆ ಮಾಡಿದೆ ಎಂದು ಗ್ವಾದಾರ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಾಳಿಯ ಹೊಣೆಯನ್ನು ನಿಷೇಧಿತ ಬಲೂಚಿಸ್ಥಾನ್ ಲಿಬರೇಶನ್ ಆರ್ಮಿ’ಯ ಮಜೀದ್ ಬ್ರಿಗೇಡ್ ಹೊತ್ತುಕೊಂಡಿದೆ. ಇತ್ತೀಚೆಗಷ್ಟೇ ಚೀನಾ ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್‌ ಯೋಜನೆಯನ್ನು ಗುರಿಯಾಗಿಸಿ ಹಲವು ದಾಳಿ ನಡೆಸಿತ್ತು.

ವಿವಿಧ ಸರ್ಕಾರಿ ಇಲಾಖೆಗಳು, ಗುಪ್ತಚರ ಸಂಸ್ಥೆಗಳು ಮತ್ತು ಅರೆಸೇನಾ ಪಡೆಗಳ ಕಚೇರಿಗಳನ್ನು ಹೊಂದಿರುವ ನೈರುತ್ಯ ಬಲೂಚಿಸ್ತಾನ್ ಪ್ರಾಂತ್ಯದ ಸಂಕೀರ್ಣಕ್ಕೆ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪ್ರದೇಶದ ಕಮಿಷನರ್ ಸಯೀದ್ ಅಹ್ಮದ್ ಉಮ್ರಾನಿ ತಿಳಿಸಿದ್ದಾರೆ.

Comments (0)
Add Comment