ಚಂದ್ರನ ನೆಲದಲ್ಲಿ ಪ್ರಗ್ಯಾನ್‌ ರೋವರ್‌ ಇಳಿದ ದೃಶ್ಯ ಸೆರೆ ಹಿಡಿದ ವಿಕ್ರಮ್‌

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ ವಿಕ್ರಮ್‌ ಮತ್ತು ಪ್ರಗ್ಯಾನ್‌ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡ್‌ ಆಗಿದೆ. ಇದರ ಬೆನ್ನಲೆ ಚಂದ್ರನ ನೆಲದಲ್ಲಿ ಪ್ರಗ್ಯಾನ್‌ ರೋವರ್‌ ಇಳಿಯುತ್ತಿರುವ ಸನ್ನಿವೇಶದ ಮೊದಲ ಚಿತ್ರ ಮತ್ತು ವಿಡಿಯೋವನ್ನು ವಿಕ್ರಮ್‌ ಲ್ಯಾಂಡರ್‌ ಸೆರೆಹಿಡಿದಿದೆ. ಈ ದೃಶ್ಯದ ವಿಡಿಯೋವನ್ನು ಇಸ್ರೋ ಹಂಚಿಕೊಂಡಿದೆ.

ಚಂದ್ರಯಾನ 3ರ ರೋವರ್‌ ಲ್ಯಾಂಡರ್‌ ನಿಂದ ಚಂದ್ರನ ಮೇಲ್ಮೈಗೆ ಹೇಗೆ ಇಳಿಯಿತು ಎಂಬ ಕ್ಯಾಪ್ಶನ್‌ ನೊಂದಿಗೆ ಇಸ್ರೋ ವಿಡಿಯೋವನ್ನು ಟ್ವೀಟ್‌ ಮಾಡಿದೆ.ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡ್‌ ಆದ ಸುಮಾರು 4ಗಂಟೆಯ ನಂತರ ಪ್ರಗ್ಯಾನ್‌ ರೋವರ್‌ ಚಂದ್ರನ ಮೇಲ್ಮೈಗೆ ಇಳಿಯುತ್ತಿರುವ ದೃಶ್ಯವನ್ನು ವಿಕ್ರಮ್‌ ಸೆರೆಹಿಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ

Comments (0)
Add Comment