ಚನ್ನಗಿರಿ ಬಿಸಿಎಂ ಅಧಿಕಾರಿ ರವಿಕುಮಾರ್ ಅಥರ್ಗಾಗೆ ದೊಬೈ ದೊರೆಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿ ಗೌರವ

 

ಚನ್ನಗಿರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕ್ ಅಧಿಕಾರಿ ರವಿಕುಮಾರ್ ಅಥರ್ಗಾ ಅವರಿಗೆ ದುಬೈನ ಅಲ್ ನಸ್ರ ಲೆಜೇಂನ್ಸ ಹಾಲ್  ನಲ್ಲಿ ದುಬೈ ದೊರೆ ಶೇಖ್ ಜಬಾಲ್ ಬಿನ್ ಶಾದ್ ಅವರು ಅಂತಾರಾಷ್ಟ್ರೀಯ ಭಾರತ ಗೌರವ ಐಕಾನ್ ಅವಾರ್ಡ್ 2023ರ ಪ್ರಶಸ್ತಿ ನೀಡಿ ಅಭಿನಂದನೆ ಸಲ್ಲಿಸಿದರು.

ಭಾರತದ ದಾದಾ ಸಾಹೇಬ್ ಪಾಲ್ಕೆ ಐಕಾನ್ ಅವಾರ್ಡ್ ಫಿಲಂಸ್ ಆರ್ಗನೆಜೇಷನ್ ಆಯೋಜನೆ ಮಾಡಿದ್ದಂತ ಈ ಕಾರ್ಯಕ್ರಮದಲ್ಲಿ ರವಿಕುಮಾರ್ ಅಥರ್ಗಾ ಅವರನ್ನ ಸನ್ಮಾನಿಸಲಾಯಿತು. ದೇಶದ ಹಲವು ರಾಜ್ಯಗಳಿಂದ ಬಂದ ಸಾಧಕರ ಸಾಲಿನಲ್ಲಿ ಕರ್ನಾಟಕದಿಂದ ಆಯ್ಕೆಯಾದ ರವಿಕುಮಾರ್ ಅಥರ್ಗಾ ಅವರು ಸಹ ಈ ಪ್ರಶಸ್ತಿಗೆ ಭಾಜನಾಗಿದ್ದರು. ಇವರು ಕಳೆದ ಅಕ್ಟೋಬರ್ 22 ರಂದು ಬಿಜಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ 68 ಕನ್ನಡ ಮತ್ತು ಹಿಂದಿ ಹಾಡುಗಳನ್ನ ನಿರಂತರವಾಗಿ ಹಾಡು ಹೇಳುವ ಮೂಲಕ ದಾಖಲೆ ಬರೆದಿದ್ದಾರೆ. ಬಾಲಿವುಡ್  ನಟಿ ಶಾರ್ಲಿನ್ ಚೋಪ್ರಾ ಸೇರಿದಂತೆ ಹಲವು ಗಣ್ಯಾತಿ ಗಣ್ಯರು ಭಾಗವಹಿಸಿದ್ದರು. ರವಿಕುಮಾರ್ ಅಥರ್ಗಾ ಅವರು ಸರ್ಕಾರಿ ಅಧಿಕಾರಿಯಾದರು ಉತ್ತಮ ಸಂಗೀತಗಾರರು, ಯಾವುದೇ ಕಾರ್ಯಕ್ರಮ ಇರಲಿ ತಮ್ಮ ಪ್ರತಿಭೆ ಅನಾವರಣ ಮಾಡಿ ಜನಮನ ಗೆದ್ದಿದ್ದರು. ಸರ್ಕಾರಿ ಅಧಿಕಾರಿಯಾಗಿ ಉತ್ತಮವಾಗಿ ಕೆಲಸ ಮಾಡಿ ಜನರ ಪ್ರೀತಿಗೂ ಪಾತ್ರರಾಗಿದ್ದರು, ಸರ್ಕಾರದ ಕೆಲಸ ದೇವರ ಕೆಲಸ ಎಂದು ನಂಬಿರುವ ಇವರು  ಬಿಡುವಿನ ವೇಳೆ ಹಾಡು ಹೇಳುವ ಅಭ್ಯಾಸ ಹೊಂದಿದ್ದು ನಿರಂತರವಾಗಿ 68 ಹಾಡುಗಳನ್ನ ಹೇಳಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರುವ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ಇವರ ಸಾಧನೆಗೆ 2023 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೆ ಐಕಾನ್ ಅವಾರ್ಡ್ ಫಿಲಂಸ್ ಆರ್ಗನೆಜೇಷನ್   ನೀಡುವ ಅಂತಾರಾಷ್ಟ್ರೀಯ ಭಾರತ ಗೌರವ ಐಕಾನ್ ಅವಾರ್ಡ್  ನೀಡಿ ಅಭಿನಂದನೆ ಸಲ್ಲಿಸಲಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿ ಸನ್ಮಾನಕ್ಕೆ ಪಾತ್ರರಾದ ರವಿಕುಮಾರ್ ಅಥರ್ಗಾ ಅವರಿಗೆ ಅವರ ಹಿತೈಷಿಗಳು, ಅಭಿಮಾನಿಗಳು ಸಹ ಶುಭ ಹಾರೈಸಿದ್ದಾರೆ.

ಚನ್ನಗಿರಿ ಬಿಸಿಎಂ ಅಧಿಕಾರಿ ರವಿಕುಮಾರ್ ಅಥರ್ಗಾಗೆ ದೊಬೈ ದೊರೆಯಿಂದ ಅಂತಾರಾಷ್ಟ್ರೀಯ ಪ್ರಶಸ್ತಿ ಗೌರವ
Comments (0)
Add Comment