ಚಿಯಾ ಸೀಡ್ಸ್: ಪುಟ್ಟದಾಗಿದ್ದರು ಬಹಳ ಉಪಕಾರಿ

ಚಿಯಾ ಬೀಜಗಳು ಚಿಕ್ಕದಾಗಿರಬಹುದು, ಆದರೆ ಅವು ಪೋಷಕಾಂಶಗಳಲ್ಲಿ ನಂಬಲಾಗದಷ್ಟು ಸಮೃದ್ಧವಾಗಿವೆ. ಪ್ರಾಚೀನ ಅಜ್ಟೆಕ್ ಮತ್ತು ಮಾಯಾ ಆಹಾರಗಳಲ್ಲಿ ಪ್ರಧಾನವಾದ ಈ ಬೀಜಗಳನ್ನು ಶತಮಾನಗಳಿಂದ ತಮ್ಮ ಆರೋಗ್ಯ ಪ್ರಯೋಜನಗಳಿಗಾಗಿ ಹೆಸರಿಸಲಾಗಿದೆ.ಆರೋಗ್ಯದ ಸುಧಾರಣೆಯಲ್ಲಿ ಈ ಚಿಯಾ ಬೀಜಗಳು ಬಹು ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತದೆ.

ಅತೀ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ, ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರವಾದ ಕೊಬ್ಬುಗಳನ್ನು ಈ ಬೀಜಗಳು ಹೊಂದಿವೆ. ಚಿಯಾ ಬೀಜಗಳನ್ನು ರಾತ್ರಿ ಮಲಗುವ ಮುನ್ನ ತಣ್ಣೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಸೇವಿಸಬಹುದು. ಮುಂಜಾನೆ ಹೊರತುಪಡಿಸಿ ಯಾವುದೇ ಸಮಯದಲ್ಲಿ ಇದನ್ನು ನೀರಿನೊಂದಿಗೆ ಸೇವಿಸಬಹುದು.

ಜೀರ್ಣಕ್ರಿಯೆಗೆ ಸಹಕಾರಿ

ಮೊದಲೇ ಹೇಳಿದಂತೆ ಇವು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಕಾರಿ. ಇದರ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.

ಆರೋಗ್ಯಕರ ಕೂದಲಿಗೆ ಉಪಕಾರಿ

ಆರೋಗ್ಯದ ಜೊತೆಗೆ, ಈ ಚಿಯಾ ಬೀಜಗಳನ್ನು ನಮ್ಮ ತಲೆ ಮತ್ತು ದೇಹದ ಆರೋಗ್ಯಕ್ಕೂ ಬಳಸಬಹುದು. ಕೂದಲು ವೇಗವಾಗಿ ಬೆಳೆಯುತ್ತದೆ. ಕೂದಲು ನಯವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಉದುರುವುದನ್ನು ತಡೆಯುತ್ತದೆ.

ತೂಕ ಇಳಿಕೆಗೆ ಸಹಕಾರಿ

ಅಧಿಕ ತೂಕ ಇರುವವರು ಈ ಚಿಯಾ ಬೀಜಗಳನ್ನು ಪ್ರತಿದಿನ ಸೇವಿಸಬಹುದು. ಹೀಗೆ ತಿನ್ನುವುದರಿಂದ ನಿಮ್ಮ ತೂಕ ಕಡಿಮೆಯಾಗುವುದಲ್ಲದೆ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಚಿಯಾ ಬೀಜಗಳನ್ನು ಪ್ರತಿದಿನ ಸೇವಿಸುವವರು 50 ಗ್ರಾಂಗಿಂತ ಹೆಚ್ಚು ಡೋಸೇಜ್ ಅನ್ನು ಸೇವಿಸಬಾರದು ಎಂದು ಅನೇಕ ವರದಿಗಳು ಸೂಚಿಸುತ್ತವೆ. ಅಂದರೆ, 5 ಟೇಬಲ್ ಸ್ಪೂನ್ಗಳಿಗಿಂತ ಹೆಚ್ಚು ಸೇವಿಸಬೇಡಿ.

Comments (0)
Add Comment