ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಘಾತದಿಂದ ನಿಧನ

ಬೀಜಿಂಗ್:ಚೀನಾದ ಮಾಜಿ ಪ್ರಧಾನಿ ಲಿ ಕೆಕಿಯಾಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಚೀನಾದ ಅಧಿಕೃತ ಪ್ರಸಾರ ಸಂಸ್ಥೆಯೊಂದು ಪ್ರಕಟಿಸಿದೆ.ಅವರಿಗೆ 68 ವರ್ಷ ವಯಸ್ಸಾಗಿತ್ತು.

ಅ. 26 ರಂದು ಹಠಾತ್‌ ಹೃದಯಘಾತ ಸಂಭವಿಸಿ ಆಸ್ಪತ್ತೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ . ಲಿ ಕೆಕಿಯಾಂಗ್ ಅವರು 2013 ರಿಂದ 2023 ರವರೆಗೆ ಚೀನಾದ ಪ್ರಧಾನಿ ಹುದ್ದೆಯನ್ನ ಅಲಂಕಾರಿಸಿದ್ದರು.1955 ರಲ್ಲಿ ಅನ್ಹುಯಿ ಪ್ರಾಂತ್ಯದ ಹೆಫೀಯ ಹುಟ್ಟೂರು. ಇಂಗ್ಲೀಷ್‌ ಭಾಷೆ ಮತ್ತು ಸಾಹಿತ್ಯದ ಮಾಜಿ ಪ್ರಾಧ್ಯಾಪಕರಾದ ಚೆಂಗ್‌ ಹಾಂಗ್‌ ಅವರನ್ನು ಮದುವೆಯಾದರು.

Comments (0)
Add Comment