ಚೆನ್ನೈ ಮಾಜಿ ಮೇಯರ್ ಪುತ್ರನ ಶವ ಅಪಘಾತವಾಗಿ 9 ದಿನಗಳ ಬಳಿಕ ನದಿಯಲ್ಲಿ ಪತ್ತೆ

ಶಿಮ್ಲಾ: ಹಿಮಾಚಲದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಸಟ್ಲೆಜ್ ನದಿಗೆ ಬಿದ್ದು ನಾಪತ್ತೆಯಾಗಿದ್ದ ಚೆನ್ನೈನ ಮಾಜಿ ಮೇಯರ್ ಪುತ್ರನ ಮೃತದೇಹ ಒಂಬತ್ತು ದಿನಗಳ ಬಳಿಕ ಪತ್ತೆಯಾಗಿದೆ.

ಸಿನಿಮಾ ನಿರ್ದೇಶಕ ಕೂಡ ಆಗಿರುವ ವೆಟ್ರಿ ದುರೈಸಾಮಿ ಅವರು ಶಿಮ್ಲಾದಿಂದ ಸ್ಪಿತಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಫೆಬ್ರವರಿ 4 ರಂದು ಅವರ ಕಾರು ಅಪಘಾತಕ್ಕೀಡಾಗಿ ಸುಮಾರು 200 ಅಡಿ ಆಳದ ಸಟ್ಲೆಜ್ ನದಿಗೆ ಬಿದ್ದಿತ್ತು.

ಇನ್ನು ಈ ವೇಳೆ ಸಹ-ಪ್ರಯಾಣಿಕ ಗೋಪಿನಾಥ್ ಅವರನ್ನು ರಕ್ಷಿಸಲಾಗಿದ್ದು, ಅಲ್ಲದೆ ಕಾರು ಚಾಲಕ ತೇಂಜಿನ್ ಅಪಘಾತದಲ್ಲಿ ಮೃತಪಟ್ಟಿದ್ದು ಅವರ ಶವ ಪತ್ತೆಯಾಗಿತ್ತು. ಆದರೆ, ವೆಟ್ರಿ ಎಲ್ಲಿದ್ದಾರೆ ಎಂಬುದು ತಿಳಿದುಬಂದಿರಲಿಲ್ಲ.

ಅಪಘಾತದಲ್ಲಿ ನಾಪತ್ತೆಯಾದ ಮಗನನ್ನು ಹುಡುಕಿ ಕೊಟ್ಟವರಿಗೆ 1 ಕೋಟಿ ರೂಪಾಯಿ ಬಹುಮಾನವನ್ನು ನೀಡುವುದಾಗಿ ವೆಟ್ರಿಯ ತಂದೆ ಸೈದೈ ದುರೈಸಾಮಿ ಘೋಷಿಸಿದ್ದರು.

ಅಪಘಾತ ನಡೆದಂದಿನಿಂದ ವೆಟ್ರಿಯ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ತಂಡಕ್ಕೆ ಸೋಮವಾರ ಅಪಘಾತ ನಡೆದ ಸ್ಥಳದಿಂದ ಸುಮಾರು ಮೂರೂ ಕಿಲೋಮೀಟರ್ ದೂರದಲ್ಲಿ ಸಟ್ಲೆಜ್ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ.

Comments (0)
Add Comment