ಜಲಪ್ರಳಯಕ್ಕೆ ಸಾಕ್ಷಿಯಾದ ಲಿಬಿಯಾ – 20 ಸಾವಿರಕ್ಕೂ ಅಧಿಕ ಮಂದಿ ಸಾವಿನ ಶಂಕೆ….!!

ಡೆರ್ನಾ ಸೆಪ್ಟೆಂಬರ್ 14: ಜಲಪ್ರಳಯ ಅಂದರೆ ಎನು ಅನ್ನೊದು ಇದೀಗ ನಿಜ ಆಗಿದ್ದು, ಲಿಬಿಯಾದಲ್ಲಿ ಉಂಟಾಜ ಜಲಪ್ರಳಯಕ್ಕೆ 20 ಸಾವಿರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಲಿಬಿಯಾದಲ್ಲಿ ಭಾರೀ ಚಂಡಮಾರುತದ ತಂದ ಅನಾಹುತದಿಂದಾಗಿ ಎರಡು ಅಣೆಕಟ್ಟು ಒಡೆದು ಜಲಪ್ರಳಯ ಉಂಟಾಗಿದೆ. ಇದರಿಂದಾಗಿ 20 ಸಾವಿರಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ.

ಈ ಪೈಕಿ ಪ್ರವಾಹದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ಡೆರ್ನಾ ನಗರವೊಂದರಲ್ಲೇ 5000 ಶವಗಳು ಪತ್ತೆಯಾಗಿದ್ದು, ಇನ್ನೂ 10000ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 20000 ದಾಟುವ ಆತಂಕ ಉಂಟಾಗಿದೆ. ಘಟನೆಯಲ್ಲಿ 10000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪ್ರವಾಹದಿಂದಾಗಿ ಡೆರ್ನಾ ನಗರ ಬಹುಪಾಲು ಕೊಚ್ಚಿ ಹೋಗಿದ್ದು, ಹೊರಗಿನ ಸಂಪರ್ಕವನ್ನು ಕಳೆದುಕೊಂಡಿದೆ. ರಕ್ಷಣಾ ಕಾರ್ಯ ನಡೆಸುವುದು ಕಷ್ಟಕರವಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆ ಮಾಡುವುದೇ ಸವಾಲಾಗಿದೆ. ಪ್ರವಾಹದಿಂದಾಗಿ ಡೆರ್ನಾ ಪಟ್ಟಣವೊಂದರಲ್ಲೇ 30000ಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. ನೆರೆಯ ಹಲವು ನಗರಗಳಲ್ಲಿ ಇದೇ ರೀತಿಯಲ್ಲಿ ಸಾಕಷ್ಟು ಪ್ರಮಾಣದ ಜನರು ನಿರ್ವಸಿತರಾಗಿದ್ದಾರೆ ಎಂದು ಅಧಿಕಾರಗಳು ಹೇಳಿದ್ದಾರೆ.

Comments (0)
Add Comment