ಜಾಕ್ವೆಲಿನ್ ಫರ್ನಾಂಡಿಸ್ ವಾಸವಾಗಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ

ಮುಂಬೈ: ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್​ನ ನವ್ರೋಜ್ ಹಿಲ್ ಸೊಸೈಟಿ ಅಪಾರ್ಟ್​ಮೆಂಟ್​ನ ಕಟ್ಟಡದಲ್ಲಿ ಮಾ. 6 ರಂದು ಬುಧವಾರ ಅಗ್ನಿ ಅವಘಡ ನಡೆದಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇಲ್ಲಿಯೇ ವಾಸವಾಗಿದ್ದಾರೆ. ಈ ಅಪಾರ್ಟ್​ಮೆಂಟ್​ನ 17 ಅಂತಸ್ತನ್ನು ಹೊಂದಿದೆ. ಸದ್ಯದ ಮಟ್ಟಿಗೆ ಯಾರಿಗೂ ಹಾನಿ ಉಂಟಾಗಿಲ್ಲ. ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.

 

ಮಾಹಿತಿ ತಿಳಿದ ತಕ್ಷಣ ನಾಲ್ಕು ಅಗ್ನಿ ಶಾಮಕ ವಾಹನ, ಮೂರು ಜಂಬೋ ಟ್ಯಾಂಕರ್ಸ್ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಪರಿಸ್ಥಿತಿ ಹದ್ದುಬಸ್ತಿಗೆ ತಂದಿದ್ದಾರೆ.

13ನೇ ಅಂತಸ್ತಿನ ಕಟ್ಟಡದ ಕಿಚನ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಇದೇ ಬಿಲ್ಡಿಂಗ್​ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಐದು ಬಿಎಚ್​ಕೆ ಮನೆ ಹೊಂದಿದ್ದಾರೆ. 2023ರಲ್ಲಿ ಅವರು ಇಲ್ಲಿ ಮನೆ ಖರೀದಿ ಮಾಡಿದ್ದರು. ಕಳೆದ ವರ್ಷ ಜುಲೈ ತಿಂಗಳಲ್ಲಿ ಅವರ ಮನೆಯ ವಿಡಿಯೋ ವೈರಲ್ ಆಗಿತ್ತು

Comments (0)
Add Comment