ಜಾಗತಿಕ ಒಳಿತಿಗಾಗಿ ಸಂಘರ್ಷವನ್ನು ನಿಲ್ಲಿಸಲು ಕರೆ ನೀಡಿದ ಮೋದಿ

ನವದೆಹಲಿ: ಪ್ರಸ್ತುತ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಸಂಭವಿಸುತ್ತಿರುವ ನಾಗರಿಕರ ಸಾವುಗಳನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ, ಸಂವಾದದ ಮೂಲಕ ಸಂಘರ್ಷವನ್ನು ನಿಲ್ಲಿಸಲು ಕರೆ ನೀಡಿದ್ದಾರೆ.

2ನೇ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅ. 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಸೇರಿದಂತೆ ಹಿಂಸಾಚಾರ ಮತ್ತು ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಒತ್ತಿ ಹೇಳಿದೆ.

ಸಂಘರ್ಷ ಪರಿಹಾರದ ಮೂಲಾಧಾರವಾಗಿ ಸಂಯಮ ಮತ್ತು ಸಂವಾದಕ್ಕೆ ಆದ್ಯತೆ ನೀಡುವ ಮಹತ್ವವನ್ನು ಮೋದಿ ಪ್ರತಿಪಾದಿಸಿದ್ದಾರೆ.

ಇನ್ನು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ನಂತರ, ನಾವು ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವನ್ನು ಸಹ ನೀಡಿದ್ದೇವೆ. ಇನ್ನಾದರೂ ಈ ಯುದ್ಧವನ್ನು ಅಂತ್ಯಗೊಳಿಸಿ ಜಾಗತಿಕ ದಕ್ಷಿಣದ ದೇಶಗಳು ಹೆಚ್ಚಿನ ಜಾಗತಿಕ ಒಳಿತಿಗಾಗಿ ಒಂದಾಗಬೇಕು ಎಂದು ಹೇಳಿದರು.

Comments (0)
Add Comment