ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಹೊಸಪೇಟೆ: ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯಿಂದ 2023-24ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವಿರ: ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಜಿಲ್ಲಾ ಹಣಕಾಸು ಮತ್ತು ಲಾಜಿಸ್ಟಿಕ್ ಸಲಹೆಗಾರರು, ತಜ್ಞ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ಭೌತಚಿಕಿತ್ಸಕರು, ಜಿಲ್ಲಾ ಸಲಹೆಗಾರರು, ಸಮಾಜಕಾರ್ಯಕರ್ತರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕ್ಷೇಮಕೇಂದ್ರ ಕಾರ್ಯಕ್ರಮ ಸಂಯೋಜಕರ ತಲಾ ಒಂದು ಹುದ್ದೆಗಳು, ಶುಶ್ರೂಷಕಿಯರ 2 ಹುದ್ದೆಗಳು ಮತ್ತು 9 ವೈದ್ಯಾಧಿಕಾರಿ (ಮೆಡಿಕಲ್ ಆಫೀಸರ್) ಹುದ್ದೆಗಳು ಖಾಲಿ ಇದ್ದು, ಅರ್ಹತೆ ಹಾಗೂ ಹೆಚ್ಚಿನ ಮಾಹಿತಿಯು ವಿಜಯನಗರ ವೆಬ್‌ಸೈಟ್  https://vijayanagara.nic.in/ ನಲ್ಲಿ ಲಭ್ಯವಿರುತ್ತದೆ.

ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚುಗೊಳಿಸುವುದು ಅಥವಾ ಕಡಿಮೆಗೊಳಿಸುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ನಿರ್ಧಾರದಂತಿರುತ್ತದೆ. ಆಯ್ಕೆಯ ಪ್ರಕ್ರಿಯೆ ಯಾವುದೇ ಬದಲಾವಣೆಯಾದರೂ ಅಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿರುತ್ತದೆ. ಕೋವಿಡ್-19 ರಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು. 6 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.2 ರಷ್ಟು, 6 ತಿಂಗಳು 1 ದಿನದಿಂದ 12 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.4 ರಷ್ಟು, 12 ತಿಂಗಳು 1 ದಿನದಿಂದ 18 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.6 ರಷ್ಟು, 18 ತಿಂಗಳು 1 ದಿನದಿಂದ 24 ತಿಂಗಳವರೆಗೆ ಸೇವೆ ಸಲ್ಲಿಸಿದವರಿಗೆ ಶೇ.8ರ ಕೃಪಾಂಕವನ್ನು ನೀಡಲಾಗುವುದು. ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಶೇಕಡ ಮತ್ತು ಕೋವಿಡ್-19 ಸೇವಾ ಅವಧಿಯ ಕೃಪಾಂಕವನ್ನು ಒಟ್ಟುಗೂಡಿಸಿ ಮೆರಿಟ್ ಲಿಸ್ಟ್ ಅನ್ನು ತಯಾರಿಸಲಾಗುವುದು ಮತ್ತು ಹೊಸ ರೋಸ್ಟರ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕಾತಿ ಮಾಡಲಾಗುವುದು. ತಜ್ಞ ವೈದ್ಯರು ಮತ್ತು ವೈದ್ಯಾಧಿಕಾರಿಗಳ ಸಂಖ್ಯೆ ತುಂಬುವವರೆಗೆ ನೇರ ಸಂದರ್ಶ ಮೂಲಕ ಆಯ್ಕೆ ಪ್ರಕ್ರಿಯೆ ಮುಂದುವರೆಸಲಾಗುವುದು.

ಅರ್ಹ ಅಭ್ಯರ್ಥಿಗಳು ಹುದ್ದೆಯ ಕುರಿತು ಹುದ್ದೆಗೆ ಸಂಬAಧಿಸಿದ ಅರ್ಜಿಯನ್ನು ಪಡೆದು, ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಲಗತ್ತಿಸಿ, ಅಗತ್ಯ ಧಾಖಲಾತಿಗಳ ಧೃಡೀಕೃತ ಪ್ರತಿಗಳೊಂದಿಗೆ ಅರ್ಜಿಯನ್ನು ನ.23 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Comments (0)
Add Comment