‘ಜ್ಞಾನವಾಪಿ ಮಸೀದಿಯಲ್ಲಿ ಹಿಂದೂ ಆರಾಧಕರು ಬಲವಂತವಾಗಿ ಪೂಜೆ ಪ್ರಾರಂಭಿಸಿದ್ದಾರೆ’- ಟಿಎಂಸಿ ನಾಯಕ ಆರೋಪ

ಕೋಲ್ಕತ್ತಾ: ಹಿಂದೂ ಆರಾಧಕರು ಬಲವಂತವಾಗಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಪ್ರಾರಂಭಿಸಿದ್ದಾರೆ. ಹೀಗಾಗಿ ಅವರು ತಕ್ಷಣವೇ ಅಲ್ಲಿಂದ ಜಾಗ ಖಾಲಿ ಮಾಡಬೇಕು ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸಿದ್ದಿಕುಲ್ಲಾ ಚೌಧರಿ ಆಗ್ರಹಿಸಿದ್ದಾರೆ.

ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವಾರಣಾಸಿಯ ನ್ಯಾಯಾಲಯ ಅನುಮತಿ ನೀಡಿದ್ದು, ಇದು ಸಜಂಜಸವಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಶ್ಚಿಮ ಬಂಗಾಳಕ್ಕೆ ಬಂದರೆ ನಾವು ಅವರನ್ನು ಸುತ್ತುವರಿಯುತ್ತೇವೆ. ಅವರು ಹೊರಗೆ ಹೋಗಲು ನಾವು ಬಿಡುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

ನಾವು ಪ್ರಾರ್ಥನೆ ಸಲ್ಲಿಸಲು ಯಾವುದೇ ದೇವಸ್ಥಾನಕ್ಕೆ ತೆರಳುವುದಿಲ್ಲ. ಹೀಗಿರುವಾಗ ಅವರು ಮಾತ್ರ ಯಾಕೆ ನಮ್ಮ ಮಸೀದಿಗಳಿಗೆ ಬರುತ್ತಿದ್ದಾರೆ? ಮಸೀದೆ ಎಂದರೆ ಅದು ಮಸೀದಿಯಷ್ಟೇ ಆಗುತ್ತದೆ. ಮಸೀದಿಯನ್ನು ಯಾರಾದರೂ ದೇವಸ್ಥಾನವಾಗಿ ಪರಿವರ್ತಿಸಬೇಕು ಅಂದುಕೊಂಡರೆ ನಾವು ಸುಮ್ಮನಿರುವುದಿಲ್ಲ. ಜ್ಞಾನವಾಪಿ ಮಸೀದಿಗೆ ಸುಮಾರು 800 ವರ್ಷಗಳ ಇತಿಹಾಸವಿದ್ದು, ಅದನ್ನು ಅವರು ಹೇಗೆ ಕೆಡವುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)
Add Comment