ಜ್ವರದಿಂದ ಇಬ್ಬರ ಸಾವು ;ಮತ್ತೆ ನಿಫಾ ವೈರಸ್‌ ಆತಂಕ- ಎಚ್ಚರಿಕೆ ಘೋಷಣೆ

ಕೋಝಿಕ್ಕೋಡ್‌: 4 ವರ್ಷಗಳ ಬಳಿಕ ಇದೀಗ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ನ ಆತಂಕ ಎದುರಾಗಿದೆ. ಇಲ್ಲಿನ ಕೋಝಿಕ್ಕೋಡ್‌ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ಮೃತಪಟ್ಟಿದ್ದು,ಇದನ್ನು ಕೇರಳ ಆರೋಗ್ಯ ಇಲಾಖೆ “ಅಸ್ವಾಭಾವಿಕ” ಎಂದು ವಿವರಿಸಿದ್ದು ಬಳಿಕ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ಘೋಷಿಸಿದೆ.

ಮೃತ ವ್ಯಕ್ತಿಗಳಲ್ಲಿ ಒಬ್ಬರ ಸಂಬಂಧಿಕರನ್ನು ಸಹ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಇದು ಬಾವಲಿ ಜ್ವರ ಅಥವಾ ನಿಫಾ ವೈರಸ್‌ ಇರಬಹುದೆಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಸಿದ್ದು, ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

2018ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಇದೇ ಜಿಲ್ಲೆಯಲ್ಲಿ ನಿಫಾ ವೈರಸ್‌ನಿಂದ ಸಾವು ಸಂಭವಿಸಿತ್ತು. 2021ರಲ್ಲಿ ಮತ್ತೆ ಕಾಣಿಸಿಕೊಂಡಿತ್ತು.

ಪಿಟಿಐ ವರದಿಯಂತೆ, ಈ ಘಟನೆ ಕೇರಳ ಆರೋಗ್ಯ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆಯೇ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸೋಮವಾರ ಪರಿಸ್ಥಿತಿಯನ್ನು ನಿರ್ಣಯಿಸಲು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

Comments (0)
Add Comment