ಟ್ರಂಪ್ ಪುತ್ರನ X ಖಾತೆ ಹ್ಯಾಕ್ – ತಂದೆ ನಿಧನರಾಗಿದ್ದಾರೆಂದು ಪೋಸ್ಟ್

ನ್ಯೂಯಾರ್ಕ್: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ X (ಹಿಂದೆ ಟ್ವಿಟರ್) ಖಾತೆಯನ್ನು ಬುಧವಾರ ಹ್ಯಾಕ್ ಮಾಡಲಾಗಿದೆ.

ಹ್ಯಾಕ್ ಆದ ಅವರ ಖಾತೆಯಿಂದ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಆಕ್ಷೇಪಾರ್ಹ ಟ್ವೀಟ್‌ಗಳ ಸರಣಿಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಧರಾಗಿದ್ದಾರೆ ಎಂದು ಘೋಷಿಸಿಯೂ ಒಂದು ಟ್ವೀಟ್ ಮಾಡಲಾಗಿದೆ.

“ನನ್ನ ತಂದೆ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದಾರೆ ಎಂದು ಘೋಷಿಸಲು ನನಗೆ ದುಃಖವಾಗಿದೆ. ನಾನು 2024 ರಲ್ಲಿ ಅಧ್ಯಕ್ಷಿಯ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ” ಎಂದು ಪೋಸ್ಟ್ ಮಾಡಲಾಗಿದೆ.

ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹಲವರಿಗೆ ಮನವರಿಕೆಯಾಗಿದ್ದರೂ, ಬಹಳಷ್ಟು X ಬಳಕೆದಾರರು ಈ ಸುದ್ದಿ ನಿಜವೆಂದುಕೊಂಡಿದ್ದರು. ಸ್ವಲ್ಪ ಸಮಯದ ನಂತರ ಈ ಪೋಸ್ಟ್ ಅನ್ನು ಅಳಿಸಲಾಗಿದೆ. ಆದರೆ, ಅದಕ್ಕೂ ಮುನ್ನ ತೆಗೆದ ಸ್ಕ್ರೀನ್‌ಶಾಟ್‌ಗಳು ಸದ್ದು ಮಾಡುತ್ತಿವೆ.

Comments (0)
Add Comment