ಡಿಸೆಂಬರ್‌ 8ಕ್ಕೆ ಯಶ್ ಹೊಸ ಚಿತ್ರ ಘೋಷಣೆ

ನಟ ರಾಕಿಂಗ್​ ಸ್ಟಾರ್​ ಯಶ್ ತಮ್ಮ 19ನೇ ಸಿನಿಮಾದ ಕುರಿತು ಬಿಗ್‌ ಅಪ್‌ಡೇಟ್‌ ನೀಡಿದ್ದಾರೆ. ​ಕೆಜಿಎಫ್, ಕೆಜಿಎಫ್ 2 (KGF 2) ಸಕ್ಸಸ್ ಬಳಿಕ ಯಶ್ ಸೈಲೆಂಟ್ ಆಗಿ ಮುಂದಿನ ಸಿನಿಮಾಗೆ ಭರ್ಜರಿ ತಯಾರಿ ಮಾಡಿಕೊಳ್ತಾ ಇದ್ದರು. ಈಗ ಬಿಗ್ ಅಪ್‌ಡೇಟ್ ಸಿಕ್ಕಿದೆ. ಡಿಸೆಂಬರ್‌ 8 ರಂದು ಯಶ್​ ತಮ್ಮ 19ನೇ ಸಿನಿಮಾದ ಟೈಟಲ್​ ಅನೌನ್ಸ್​ ಮಾಡಲು ಸಜ್ಜಾಗಿದ್ದಾರೆ. ಆದರೆ ಈ ಬಾರಿ ಇವರ ಜೊತೆಗೆ ಕೆವಿಎನ್​ ಪ್ರೊಡಕ್ಷನ್​ ಕೈಜೋಡಿಸಿದೆ. ರವಿವಾರವಷ್ಟೇ ಸಾಮಾಜಿಕ ಜಾಲತಾಣದಲ್ಲಿ ಲೋಡಿಂಗ್ ಎಂದು ಬರೆದುಕೊಂಡಿದ್ದವರು, ಇಂದು ತಮ್ಮ ಹೊಸ ಸಿನಿಮಾದ ಟೈಟಲ್ ಘೋಷಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 8ರಂದು ಮುಂಜಾನೆ 9.55ಕ್ಕೆ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳ ನಿರೀಕ್ಷೆಯಂತೆ ಯಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಯಶ್ ಕಡೆಯಿಂದ ಮುಂದಿನ ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಾಕಿಭಾಯ್ ಆಗಿ ಘರ್ಜಿಸಿದ ಮೇಲೆ ಯಶ್ 19 (Yash 19) ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಲೋಡಿಂಗ್ ಎಂಬ ಬರಹದ ಮೂಲಕ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ. ಈ ಮೂಲಕ ‘ಯಶ್ 19′ ಸಿನಿಮಾಗೆ ಕೌಂಟ್ ಡೌನ್ ಶುರುವಾಗಿದೆ.

Comments (0)
Add Comment