ಡಿ.1ರಿಂದ ಹೊಸ ಸಿಮ್ ಖರೀದಿಸುವ ನಿಯಮ ಬದಲು.!

 

ದೆಹಲಿ: ಇನ್ಮುಂದೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಹಾಗೂ  ಮಾರಾಟ ಮಾಡುವ ನಿಯಮಗಳು ಡಿ. 1ರಿಂದ ಬದಲಾಗಲಿವೆ.

ಒಂದೇ ಐಡಿಯಲ್ಲಿ ಜನರು ಹಲವು ಸಿಮ್‌ಗಳನ್ನು ಖರೀದಿಸುತ್ತಿದ್ದರು, ಆದರೆ ಈಗ ಒಂದು ಐಡಿಯಲ್ಲಿ ಸೀಮಿತ ಸಿಮ್‌ಗಳನ್ನು ಖರೀದಿಸಬೇಕಾಗುತ್ತದೆ. ಇದರೊಂದಿಗೆ, ಸಿಮ್‌ಗಳನ್ನು ಮಾರಾಟ ಮಾಡುವ ವಿತರಕರು ತಮ್ಮ ಪೊಲೀಸ್‌ ಪರಿಶೀಲನೆ ಮತ್ತು ಬಯೋಮೆಟ್ರಿಕ್ ಪರಿಶೀಲನೆಯನ್ನು ಸಹ ಪಡೆಯಬೇಕಾಗುತ್ತದೆ.

ಇದನ್ನು ನಿರ್ಲಕ್ಷಿಸಿ ಸಿಮ್ ಮಾರಾಟ ಮಾಡಿದರೆ, ಅವರಿಗೆ ₹10 ಲಕ್ಷ ದಂಡ/ ಜೈಲು ಶಿಕ್ಷೆ ವಿಧಿಸಲಾಗುತ್ತದೆಯಂತೆ.!

ನಾಳೆಯಿಂದ ಡಿ.1ರಿಂದ ಹೊಸ ಸಿಮ್ ಖರೀದಿಸುವ ನಿಯಮ ಬದಲು.!
Comments (0)
Add Comment