ತಂದೆಯ ಮೊಬೈಲ್‌, ಬ್ಯಾಗ್‌ ಕಳ್ಳತನ ಮಾಡಿದ್ದವವನ್ನು ಗೂಗಲ್‌ ಮ್ಯಾಪ್‌ ನಿಂದ ಪತ್ತೆಹಚ್ಚಿದ ಮಗ!

ಬೆಂಗಳೂರು: ರೈಲಿನಲ್ಲಿ ತಂದೆಯ ಬ್ಯಾಗ್ ಹಾಗೂ ಮೊಬೈಲ್ ಕಳ್ಳತನ ಮಾಡಿದ ಕಳ್ಳನೊಬ್ಬನನ್ನು ಮೊಬೈಲ್ ಕಳೆದುಕೊಂಡವರ ಮಗ, ಗೂಗಲ್‌ ಮ್ಯಾಪ್‌ ಸಹಾಯದಿಂದ ಪತ್ತೆಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡಿನ ರಾಜಭಗತ್ ಪಳನಿಸ್ವಾಮಿ ಟೆಕ್ಕಿ ಎಂಬವರು ಗೂಗಲ್‌ ಮ್ಯಾಪ್‌ನಿಂದ ಪತ್ತೆ ಹಚ್ಚಿದ ಕೆಲಸ ಮಾಡಿದ್ದಾರೆ.ರಾಜಭಗತ್ ಅವರ ತಂದೆ ಕಳೆದ ಭಾನುವಾರ ತಮಿಳುನಾಡಿನ ಕನ್ಯಾಕುಮಾರಿ ಬಳಿ ನಾಗರ್‌ಕೋಯಿಲ್‌ ನಿಂದ ಕಾಚಿಗುಡ್ ಎಕ್ಸ್ಪ್ರೆಸ್ ರೈಲಿನಲ್ಲಿ ತಿರುಚನಾಪಳ್ಳಿಗೆ ತೆರಳುತ್ತಿದ್ದರು. ಬೆಳಿಗ್ಗೆ 1.15ರ ಸುಮಾರು ನಾಗರ್‌ಕೋಯಿಲ್‌ ನಲ್ಲಿ ರೈಲು ಹತ್ತಿದ್ದ ಅವರು ಬೆಳಗಿನ ಜಾವ ತಿರುನಲ್ವೇಲಿ ಜಂಕ್ಷನ್‌ ನಲ್ಲಿ ರಾಜಭಗತ್ ಅವರ ತಂದೆ ಫೋನ್ ಮೂಲಕ ಬ್ಯಾಗ್ ಕಳೆದುಕೊಂಡಿದ್ದ ವಿಚಾರ ಮಗನಿಗೆ ಬೇರೊಬ್ಬರ ಮೊಬೈಲ್‌ ಸಹಾಯದಿಂದ ತಿಳಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಮಗ ರಾಜಭಗತ್, ಗೂಗಲ್‌ ಮ್ಯಾಪ್‌ ಸಹಾಯದಿಂದ ತಂ ದೆಯ ಮೊಬೈಲ್ ಅನ್ನು ಟ್ರ್ಯಾಕ್‌ ಮಾಡಿದ್ದಾರೆ. ಕಳ್ಳ ಫೋನ್ ಹಾಗೂ ಬ್ಯಾಗ್ ಎತ್ತಿಕೊಂಡು ತಿರುನಲ್ವೇ ಲಿ ನಿಲ್ದಾಣದಲ್ಲಿ ಇಳಿದು ವಾಪಸ್ ನಾಗರ್‌ಕೋಯಿಲ್‌ಗೆ ಇನ್ನೊಂ ದು ರೈಲಿನಲ್ಲಿ ತೆರಳುತ್ತಿದ್ದ.ಕೂಡಲೇ ತಿರುಚನಾಪಳ್ಳಿಯಿಂದ ನಾಗರ್‌ಕೋಯಿಲ್‌ಗೆ ತೆರಳಿದ ರಾಜಭಗತ್ ಅವರು, ರೈ ಲ್ವೆ ಪೊಲೀಸರ ಹಾಗೂ ಅಲ್ಲಿನ ಸ್ಥಳೀಯ ಸ್ನೇಹಿತನಸಹಾಯದಿಂದ ಗೂಗಲ್‌ ಮ್ಯಾಪ್‌ ಆಧರಿಸಿ ಕಳ್ಳನನ್ನು ಬೆನ್ನು ಹತ್ತಿದ್ದರು.. ನಾಗಕೋಯಿಲ್ ರೈಲು ನಿಲ್ದಾಣದಲ್ಲಿ ಕಳ್ಳ ಸಿಕ್ಕಿಬಿದ್ದ, ಆದರೆ ಜನಸಂದಣಿಯಿಂದ ಕಳ್ಳ ಮಿಸ್‌ ಆದ ಆತ ಬಸ್ ಹತ್ತಿ ಹೋಗಿದ್ದ.ಮತ್ತೆ ಬೆನ್ನು ಬಿದ್ದ ರಾಜಭಗತ್ ಅಣ್ಣಾ ಬಸ್ ನಿಲ್ದಾಣದ ಬಳಿ ಹೋದಾಗ ಕಳ್ಳ ಸಿಕ್ಕಿ ಬಿದ್ದ ಎನ್ನಲಾಗಿದೆ. ರಾಜಭಗತ್ ಅವರು ಸ್ಥಳೀಯರ ನೆರವಿನಿಂದ ಕಳ್ಳನನ್ನು ಹಿಡಿದು ಪರಿಶೀಲಿಸಿದಾಗ ಅವರ ತಂದೆಯ ಮೊಬೈಲ್ ಹಾಗೂ ಬ್ಯಾಗ್ ಮತ್ತು ಬ್ಯಾಗ್‌ ನಲ್ಲಿದ್ದ ₹1000 ಸಿಕ್ಕಿದೆ.

ಈ ವಿಷಯವನ್ನು ರಾಜಭಗತ್ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಘಟನೆ ಕುರಿತು ಹಂಚಿಕೊಂಡಿದ್ದು ಗೂಗಲ್‌ ಮ್ಯಾಪ್‌ಗೆ ಧನ್ಯವಾದ ಸಲ್ಲಿಸಿದ್ದಾರೆ. ಅವರು ಕಳ್ಳನ ವಿರುದ್ಧ ದೂರು ದಾಖಲಿಸಿ ಸ್ಥಳೀಯ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ.ರಾಜಭಗತ್ ಅವರು ಸಿವಿಲ್ ಎಂಜಿನಿಯರ್ ಜೊತೆಗೆ ವಿಶೇಷವಾಗಿ ನಕ್ಷೆ ತಜ್ಞನಾಗಿದ್ದು, ನಕ್ಷೆ ವಿಷಯವಾಗಿ ಪೊನ್ನಿಯನ್ ಸೆಲ್ವನ್ ಸಿನಿಮಾಕ್ಕೆ ಕೆಲಸ
ಮಾಡಿದ್ದೇನೆ ಎಂದು ಹೇ ಳಿಕೊಂಡಿದ್ದಾರೆ.

Comments (0)
Add Comment