ತಡರಾತ್ರಿ ಫುಡ್ಸ್‌ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ​​ ಮೆಕ್ಕೆಜೋಳ ಕುಸಿತ ಮೂವರು ಸಾವು.!

 

ವಿಜಯಪುರ:  ಇಲ್ಲಿನ ರಾಜಗುರು ಫುಡ್ಸ್‌ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ​ ಮೆಕ್ಕೆಜೋಳ ಕುಸಿತ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ರಾಶಿಯೊಳಗೆ ಸಿಲುಕಿದ್ದ ಮೂವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದೆ.

ಮೃತರು ಬಿಹಾರ ಮೂಲದ ರಾಜೇಶ್ ಮುಖಿಯಾ(25), ರಾಮ್ರೀಜ್ ಮುಖಿಯಾ (29) ಸಂಬೂ ಮುಖಿಯಾ(26) ಎಂದು ತಿಳಿದುಬಂದಿದೆ.

ರಕ್ಷಣಾ ತಂಡ ಸೋನುಕುಮಾರ್ ಎಂಬಾತನನ್ನು ರಕ್ಷಿಸಿದೆ. ರಾಶಿಯೊಳಗೆ 6 ರಿಂದ 7 ಜನ ಕಾರ್ಮಿಕರು ಸಿಲುಕಿದ್ದಾರೆ. ಸ್ಥಳೀಯ ಪೊಲೀಸ್​ ಅಧಿಕಾರಿಗಳು ಮತ್ತು ಎರಡು ಎಸ್​​ಡಿಆರ್​ಫ್​ ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ.

ತಡರಾತ್ರಿ ಫುಡ್ಸ್‌ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ​​ ಮೆಕ್ಕೆಜೋಳ ಕುಸಿತ ಮೂವರು ಸಾವು.!
Comments (0)
Add Comment