ತಲೆ ನೋವಿಗೆ ಮನೆ ಔಷಧಿ..!

ಚಳಿಗಾಲದ ಸಂದರ್ಭದಲ್ಲಿ ಶೀತ, ನೆಗಡಿ, ತಲೆನೋವು ಸಾಮಾನ್ಯ, ಒಮ್ಮೆ ತಲೆನೋವು ಬಂತು ಎಂದರೆ ಸಾಕು ಸುಲಭವಾಗಿ ಹೋಗುವುದಿಲ್ಲ. ಇದು ಚಿತ್ರಹಿಂಸೆ ನೀಡುತ್ತದೆ. ಅದಕ್ಕೆ ಕೆಲವೊಂದು ಮನೆಮದ್ದುಗಳಿದೆ. ಯಾವುವು ಎಂಬುದು ಇಲ್ಲಿದೆ. ತಲೆನೋವು ಹೆಚ್ಚಾದಾಗ ಹೆಚ್ಚು ನೀರನ್ನು ಕುಡಿಯಬೇಕು ಎನ್ನಲಾಗುತ್ತದೆ.

ಚನ್ನಾಗಿ ನೀರು ಕುಡಿಯುವುದರಿಂದ ನಿಮ್ಮ ತಲೆನೋವಿಗೆ ಪರಿಹಾರ ನೀಡುತ್ತದೆ. ಶುಂಠಿಯು ತಲೆನೋವು ನಿವಾರಣೆ ಮಾಡಲು ಸಹಕಾರಿ ಎನ್ನಲಾಗುತ್ತದೆ, ನೀವು ಒಂದು ಇಂಚು ಶುಂಠಿಯನ್ನು ಜಜ್ಜಿಕೊಂಡು ಬಿಸಿ ನೀರಿಗೆ ಹಾಕಿ ಕುಡಿದರೆ ನಿಮ್ಮ ತಲೆನೋವಿಗೆ ಪರಿಹಾರ ಲಭಿಸುತ್ತದೆ. ಈ ಓಂ ಕಾಳಿನಲ್ಲಿ ಥೈಮೋಲ್ ಅಂಶವಿದ್ದು ಇದು ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಓಮ ಕಾಳನ್ನು ಸ್ವಲ್ಪ ತೆಗೆದುಕೊಂಡು ಜಗಿಯುವುದರಿಂದ ತಲೆನೋವು ಕಡಿಮೆ ಆಗುವುದು.

ತುಳಸಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣ ನಿಮ್ಮ ತಲೆ ನೋವಿಗೆ ತ್ವರಿತ ಪರಿಹಾರ ನೀಡುತ್ತದೆ. ನೀವು ತುಳಸಿಯನ್ನು ಜಜ್ಜಿ ಅಥವಾ ಹಾಗೆಯೇ ಅದರ ಎಲೆಗಳನ್ನು ಜಗಿಯುವ ಮೂಲಕ ರಸವನ್ನು ಸೇವನೆ ಮಾಡುವುದು ಪ್ರಯೋಜನ ನೀಡುತ್ತದೆ. ಇಂಗಿನಲ್ಲಿ ಆಂಟಿಆಕ್ಸಿಡೆಂಟ್ ಅಂಶವಿದ್ದು, ಇದು ನೋವನ್ನು ಕಡಿಮೆ ಮಾಡುತ್ತದೆ.

ಬಿಸಿ ನೀರಿಗೆ ಒಂದು ಚಮಚ ಇಂಗನ್ನು ಸೇರಿಸಿ ಸೇವನೆ ಮಾಡುವುದು ತಕ್ಷಣ ತಲೆನೋವಿಗೆ ಪರಿಹಾರ ನೀಡುತ್ತದೆ. ಪುದೀನಾದಲ್ಲಿ ಸಹ ಹಲವಾರು ಆರೋಗ್ಯಕರ ಅಂಶಗಳಿದ್ದು, ಇದರ ಚಹಾ ಕುಡಿಯುವುದರಿಂದ ತಲೆನೋವು ಬೇಗ ಮಾಯವಾಗುತ್ತದೆ.ಲವಂಗದಲ್ಲಿ ಫೆನೊಲಿಕ್ ಅಂಶವಾಗಿರುವಂತಹ ಯುಜೆನಾಲ್ ಮತ್ತು ಗ್ಯಾಲ್ಲಿಕ್ ಆಮ್ಲವಿದೆ. ಇದು ಉರಿಯೂತದ ವಿರುದ್ಧ ಹೋರಾಡುವುದರಿಂದ ತಲೆನೋವು ಕಡಿಮೆಯಾಗುತ್ತದೆ. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ.)

Comments (0)
Add Comment