ತಿಂಗಳಾಂತ್ಯಕ್ಕೆ ರೈಲ್ವೆ ರೆಸ್ಟೋರೆಂಟ್ ಆರಂಭ : ಹಳೆ ಬೋಗಿಗಳಿಗೆ ಹೊಸ ರೂಪ..!

ಬೆಂಗಳೂರು : ಹಳೆಯ ರೈಲು ಕೋಚ್ ಗಳಿಗೆ ಹೊಸ ಸುಂದರವಾದ ರೆಸ್ಟೋರೆಂಟ್ ಲೂಕ್ ಕೊಡಲು ಬೆಂಗಳೂರು ರೈಲ್ವೆ ವಿಭಾಗವು ನಿರ್ಧರಿಸಿದ್ದು, ತಿಂಗಳಾಂತ್ಯದಲ್ಲಿ ರೆಸ್ಟೋರೆಂಟ್ ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹೌದು, ಈ ತಿಂಗಳಾಂತ್ಯದಲ್ಲಿ ಎರಡು ರೈಲು ರೆಸ್ಟೋರೆಂಟ್ ಕಾರ್ಯಾರಂಭ ಮಾಡುವ ನಿರೀಕ್ಷೆಯಿದ್ದು, ಬೆಂಗಳೂರು ಸಿಟಿ ರೈಲು ನಿಲ್ದಾಣ ಮತ್ತು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ರೈಲು ಹಳಿಗಳ ಮೇಲೆ ರೈಲು ರೆಸ್ಟೋರೆಂಟ್ ನಿರ್ಮಾಣವಾಗಲಿದೆ. ಇನ್ನು ಈ ರೆಸ್ಟೋರೆಂಟ್ ಗಳು ಸಸ್ಯಾಹಾರಿಯಾಗಿದ್ದು ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಶೈಲಿಯ ಪುಡ್‌ ಪೂರೈಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದಲ್ಲಿ ಮೆನು ವಿಸ್ತರಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. ಇನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪ್ರತಿ ನಿತ್ಯ 2 ಲಕ್ಷಕ್ಕೂ ಕೆಚ್ಚು ಜನ ಸಂಚರಿಸುತ್ತಿದ್ದು, ರೈಲ್ವೆ ಇಲಾಖೆ ಉತ್ತಮ ಆದಾಯವನ್ನು ನಿರೀಕ್ಷಿಸುತ್ತಿದೆ. ಹಾಗೂ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬಳಿ 60 ಸಾವಿರಕ್ಕೂ ಹೆಚ್ಚು ಜನ ಸಂಚರಿಸುತ್ತಿದ್ದು, ಈಗಾಗಲೇ ರೈಲು resturant ಗುತ್ತಿಗೆ ಪಡೆಯುವವರಿಗೆ ಪರವಾನಗಿ ಶುಲ್ಕವಾಗಿ ವರ್ಷಕ್ಕೆ 33 ಲಕ್ಷ ಪಡೆಯಲು ರೈಲ್ವೆ ಇಲಾಖೆ ಮುಂದಾಗಿದೆ. ಒಟ್ಟಾರೆ ಕಳೆದ ವರ್ಷವೇ ಪ್ರಾರಂಭವಾಗಬೇಕಿದ ರೈಲ್ವೆ ರೆಸ್ಟೋರೆಂಟ್ ಎರೆಡು ಬಾರಿ ಮುಂದೂಡಿಕೆಗೊಂಡಿದೆ. ಸದ್ಯ ಈ ತಿಂಗಳಾಂತ್ಯಕ್ಕೆ ರೆಸ್ಟೋರೆಂಟ್ ಪ್ರಾರಂಭವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Comments (0)
Add Comment