ತುಂಬೆ ಗಿಡದಲ್ಲಿ ತುಂಬಿದೆ ಔಷಧೀಯ ಗುಣ

ತುಂಬೆ ಎಲೆಯ ರಸವನ್ನು ಹಾವು ಕಚ್ಚಿರುವ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷವು ರಕ್ತದಲ್ಲಿ ಸೇರಿಕೊಳ್ಳದೆ ಸಾವು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತೆ ಅಂತ ಹೇಳಲಾಗುತ್ತದೆ.

ತುಂಬೆ ಗಿಡದ ಎಲೆಯ ರಸವನ್ನು ತೆಗೆದು ಕರಿಮೆಣಸಿನ ಕಾಳು ಅಥವಾ ಪುಡಿಯನ್ನು ಸೇರಿಸಿ ಕುದಿಸಿ ಕಷಾಯ ಮಾಡಿಕೊಂಡು ಕುಡಿದರೆ ದೇಹದಲ್ಲಿ ಜ್ವರದ ತಾಪಮಾನ ಅರ್ಧಗಂಟೆಯಲ್ಲಿ ನಿಯಂತ್ರಣಕ್ಕೆ ಬರುತ್ತದೆ.

ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆ ಇದ್ದರೆ ತುಂಬೆ ಗಿಡದ ರಸಕ್ಕೆ ಸ್ವಲ್ಪ ತಣ್ಣನೆಯ ನೀರು ಇಲ್ಲವೇ ಹಾಲು ಸೇರಿಸಿ ಅದರಿಂದ ಮುಖವನ್ನು ತೊಳೆದರೆ ಕಣ್ಣಿಗೆ ತಂಪೆನಿಸುತ್ತದೆ.

ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ, ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ, ಆ್ಯಂಟಿ ಸೆಪ್ಟಿಕ್ ಕ್ರೀಮ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ನೀರಿಗೆ ತುಂಬೆ ರಸವನ್ನು ಸೇರಿಸಿ ಪ್ರತಿನಿತ್ಯ ಸ್ನಾನ ಮಾಡುವುದರಿಂದ ಚರ್ಮದ ಸಮಸ್ಯೆಗಳು ಬಗೆಹರಿಯುತ್ತದೆ. ತುಂಬೆಗಿಡವನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ. ಸ್ವಲ್ಪ ಉಪ್ಪು ಮಿಶ್ರಣದ ಕಷಾಯವು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಉದರದ ಸಮಸ್ಯೆಯ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.

Comments (0)
Add Comment