ತುರ್ತು ಭೂಸ್ಪರ್ಶ ಮಾಡಿದ ಸೇನಾ ವಿಮಾನ: ತಪ್ಪಿದ ದುರಂತ

ಬೆಂಗಳೂರು: ತಾಂತ್ರಿಕ ಸಮಸ್ಯೆ ಹಿನ್ನೆಲೆ ಸೇನಾ ವಿಮಾನವೊಂದು ತುರ್ತು ಭೂಸ್ಪರ್ಶಮಾಡಿದ್ದು, ಭಾರೀ ದುರಂತವೊಂದು ತಪ್ಪಿದೆ. ಎಚ್ ಎಎಲ್ ನಿಂದ ಟೇಕ್ ಆಫ್ ಆಗಿ ಬಿಐಎಎಲ್ ಗೆ ಹೊರಟಿದ್ದ ವಿಟಿ-ಕೆಬಿಎನ್ ಹೆಸರಿನ 1ಎ ಸೇನಾ ವಿಮಾನದ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ ಎಚ್ ಎಎಲ್ ನಲ್ಲೆ ಲ್ಯಾಂಡ್ ಮಾಡಲಾಗಿದೆ.

ಜಾಲತಾಣದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್‌ ಗಳ ಮೇಲೆ ತೀವ್ರ ನಿಗಾ

ವಿಮಾನ ಲ್ಯಾಂಡಿಂಗ್ ವೇಳೆ ಮಗುಚಿ ಬೀಳುವ ಹಂತಕ್ಕೆ ಹೋಗಿತ್ತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು ಸದ್ಯ ಯಾರಿಗೂ ಪ್ರಾಣಾಪಾಯವಾಗಿಲ್ಲ. ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸುರಕ್ಷಿತ ಭೂಸ್ಪರ್ಶಕ್ಕಾಗಿ ರನ್‌ವೇಯಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸೇನಾ ವಿಮಾನವನ್ನು ಕೇವಲ ಎರಡೇ ಚಕ್ರಗಳಲ್ಲಿ ಲ್ಯಾಂಡ್ ಮಾಡಲಾಯಿತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದ್ದನ್ನು ಕಂಡು ಎಚ್‌ಎಎಲ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

Comments (0)
Add Comment