ತೆರಿಗೆದಾರರಿಗೊಂದು ಸಂತಸದ ಸುದ್ದಿ 7 ಲಕ್ಷ ರೂಪಾಯಿವರೆಗೆ ನೋ ಟ್ಯಾಕ್ಸ್

ದೆಹಲಿ : 2024 ರ ಈ ಬಜೆಟ್‌ನಲ್ಲಿ ಬಹುನಿರೀಕ್ಷೆಯಂತೆ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯಲ್ಲಿ (Income Tax Slab 2023) ಪರಿಷ್ಕರಣೆ ಮಾಡಲಾಗಿದೆ. ಪ್ರಸ್ತುತ, ವಾರ್ಷಿಕ 5 ಲಕ್ಷ ರೂಪಾಯಿವರೆಗಿನ ಆದಾಯದ ಮೇಲೆ ಯಾವುದೇ ಆದಾಯ ತೆರಿಗೆ ಇರಲಿಲ್ಲ. ಈ ಮಿತಿಯನ್ನು ಈಗ 7 ಲಕ್ಷ ರೂಪಾಯಿಗೆ ಹೆಚ್ಚಿಸಿರುವುದಾಗಿ ನಿರ್ಮಲಾ ಸೀತಾರಾಮನ್‌ ಘೋಷಣೆ ಮಾಡಿದ್ದಾರೆ.

ಅಂದರೆ, ನಿಮ್ಮ ವಾರ್ಷಿಕ ಆದಾಯ 7 ಲಕ್ಷ ರೂಪಾಯಿಗಳವರೆಗೆ ಇದ್ದರೆ, ನೀವು ಆದಾಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಕೇಂದ್ರ ಸರ್ಕಾರ 2022-23ನೇ ಸಾಲಿನ ತೆರಿಗೆ ಪದ್ಧತಿಯನ್ನೇ ಮುಂದುರಿಸಲು ತೀರ್ಮಾನಿಸಿದೆ. ಹಾಲಿ ಇರುವ ತೆರಿಗೆ ಪದ್ಧತಿಯನ್ನೇ ಮುಂದುವರಿಸಲಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. 7 ಲಕ್ಷ ರೂಪಾಯಿ ಆದಾಯ ಇರುವವರಿಗೆ ತೆರಿಗೆ ಇಲ್ಲ. ಅಂದ್ರೆ ಆದಾಯ ತೆರಿಗೆ ಪಾವತಿದಾರರು 7 ರೂಪಾಯಿವರೆಗೂ ವಿನಾಯಿತಿಯನ್ನು ಪಡೆಯಬಹುದು.

Comments (0)
Add Comment