ತೇಜಸ್ ಏರ್‌ಕ್ರಾಫ್ಟ್‌ನಲ್ಲಿ ಪ್ರಯಾಣಿಸಿದ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ – ಪ್ರಧಾನಿ ಮೋದಿ

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಶನಿವಾರ ಬೆಳಗ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ತೇಜಸ್‌ ಫೈಟರ್‌ ಜೆಟ್‌ನಲ್ಲಿ ಪ್ರಯಾಣಿಸುವ ಮೂಲಕ ಮೂಲಕ ಗಮನ ಸೆಳೆದಿದ್ದಾರೆ.

ಎಚ್‌ ಎ ಎಲ್‌ ನಲ್ಲಿರುವ ರಕ್ಷಣಾ ವಲಯದ ಉತ್ಪಾದನಾ ಘಟಕ ಪರಿಶೀಲನೆ ನಡೆಸಿದ ಮೋದಿ, ತೇಜಸ್‌ ಫೈಟರ್‌ ಜೆಟ್‌ಗಳ ಸೌಲಭ್ಯ ಮೇಲ್ವಿಚಾರಣೆ ನಡೆಸಿದರು. ಬಳಿಕ ತೇಜಸ್‌ ಯುದ್ಧ ವಿಮಾನದ ಪರೀಕ್ಷಾರ್ಥವಾಗಿ ಹೆಚ್‌ಎಎಲ್‌ನಲ್ಲಿ ಒಂದು ಸುತ್ತು ಹಾರಾಟ ನಡೆಸಿ ಆಕರ್ಷಿಸಿದ್ರು.

ಈ ಸಂತಸವನ್ನು ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡ ಅವರು, ತೇಜಸ್‌ನಲ್ಲಿ ಒಂದು ಪಯಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅನುಭವವು ವಿಸ್ಮಯಕಾರಿಯಾಗಿ ಪುಷ್ಟೀಕರಿಸಿದೆ ಇದು ನಮ್ಮ ದೇಶದಲ್ಲಿ ಸ್ಥಳೀಯ ರಕ್ಷಣಾ ವಲಯಗಳ ಸಾಮರ್ಥ್ಯದ ಬಗ್ಗೆ ನನ್ನಲ್ಲಿ ಗಣನೀಯವಾಗಿ ವಿಶ್ವಾಸ ಹೆಚ್ಚಿಸಿತು. ಜೊತೆಗೆ ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆಯೂ ಹೆಮ್ಮೆ ಮತ್ತು ಆಶಾವಾದವನ್ನು ಹೆಚ್ಚಿಸಿದೆ ಎಂದು ಹೇಳಿಕೊಂಡಿದ್ದಾರೆ

ಮೋದಿ ಆಗಮನದ ವೇಳೆ ಎಚ್‌ಎಎಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

Comments (0)
Add Comment