ಥಟ್ಟಂತ ಮಾಡಿ ಮಸಾಲಾ ರವಾ ಇಡ್ಲಿ

ಬೇಕಾಗುವ ಸಾಮಾಗ್ರಿಗಳು :

ಚಿರೋಟಿ ರವಾ – 2 ಕಪ್, ಮೊಸರು – 1.5 ಕಪ್, ನೀರು – ಅರ್ಧ ಕಪ್, ಎಣ್ಣೆ – 2 ಟೀ ಸ್ಪೂನ್, ಸಾಸಿವೆ – ಅರ್ಧ ಟೀ ಸ್ಪೂನ್, ಉದ್ದಿನ ಬೇಳೆ – ಅರ್ಧ ಟೀ ಸ್ಪೂನ್, ಕಡಲೇಬೇಳೆ – ಅರ್ಧ ಟೀ ಸ್ಪೂನ್, ಸಣ್ಣಗೆ ಹೆಚ್ಚಿರುವ 6-7 ಕರಿಬೇವುಸೊಪ್ಪು, ಶುಂಠಿ – 1 ಟೀ ಸ್ಪೂನ್, ಹಸಿಮೆಣಸಿನಕಾಯಿ – 2, ಗೋಡಂಬಿ – ಸ್ವಲ್ಪ

ಮಾಡುವ ವಿಧಾನ : ಒಂದು ಪಾತ್ರೆಗೆ 2 ಕಪ್ ಚಿರೋಟಿ ರವೆ ಹಾಕಿ. ಬಳಿಕ ಇದಕ್ಕೆ 1.5 ಕಪ್ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅರ್ಧ ಕಪ್ ನಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. 10 ನಿಮಿಷ ಹಾಗೆಯೇ ಇಡಿ. ಸ್ಟೌವ್ ನಲ್ಲಿ ಒಂದು ಬಾಣಲೆ ಇಟ್ಟು ಅದಕ್ಕೆ 2 ಟೀ ಸ್ಪೂನ್ ಎಣ್ಣೆ ಹಾಕಿ. ಇದಕ್ಕೆ ಅರ್ಧ ಟೀ ಸ್ಪೂನ್ ಸಾಸಿವೆ, ಅರ್ಧ ಟೀ ಸ್ಪೂನ್ ಉದ್ದಿನ ಬೇಳೆ, ಅರ್ಧ ಟೀ ಸ್ಪೂನ್ ಕಡಲೇಬೇಳೆ, ಮಂಗಳೂರಲ್ಲಿ ಮಂಗಳಮುಖಿಯರ ನಡುವೆ ಘರ್ಷಣೆ ಸಣ್ಣಗೆ ಹೆಚ್ಚಿರುವ 6-7 ಕರಿಬೇವುಸೊಪ್ಪು ಹಾಕಿ ಹುರಿಯಿರಿ. ಬಳಿಕ 1 ಟೀ ಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ ಸೇರಿಸಿ. ಜೊತೆಗೆ ಸಣ್ಣಗೆ ಹೆಚ್ಚಿದ 2 ಹಸಿಮೆಣಸಿನಕಾಯಿಯನ್ನು ಕೂಡ ಒಟ್ಟಿಗೆ ಹುರಿಯಿರಿ. ಸ್ವಲ್ಪ ಗೋಡಂಬಿ, ತುರಿದ ಕ್ಯಾರೆಟ್ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಇದನ್ನು ನೆನೆಸಿಟ್ಟ ರವಾಗೆ ಸೇರಿಸಿ, ಜೊತೆಗೆ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಇಡ್ಲಿ ಹದಕ್ಕೆ ಆಗುವಷ್ಟು ಹಿಟ್ಟಿಗೆ ನೀರು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇಡ್ಲಿ ಪ್ಲೇಟಿಗೆ ಹಿಟ್ಟು ಹಾಕಿ 12 ರಿಂದ 13 ನಿಮಿಷಗಳವರೆಗೆ ಬೇಯಿಸಿದರೆ ಸವಿಯಲು ಮಸಾಲಾ ಇಡ್ಲಿ ಸಿದ್ಧ.

Comments (0)
Add Comment