ದೀಪಾವಳಿ ಸಂಭ್ರಮಕ್ಕೆ ಸಲ್ಲು ನಟನೆಯ ‘ಟೈಗರ್ 3’ ರಿಲೀಸ್

ಮುಂಬೈ: ನಟ ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಸಿನಿಮಾ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ರಿಲೀಸ್ ಆಗಲಿದೆ. ಕತ್ರೀನಾ ಕೈಫ್ ಜೊತೆ ಮತ್ತೊಮ್ಮೆ ಬೆಳ್ಳಿ ತೆರೆ ಮೇಲೆ ಮಿಂಚಲಿರುವ ಸಲ್ಲು ಭಾಯ್‌ನನ್ನು ನೋಡಲು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಇನ್ನು ಈ ಸಿನಿಮಾ ನವೆಂಬರ್ 12ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3, ಸರಿಸುಮಾರು 2 ಗಂಟೆ 35 ನಿಮಿಷಗಳ ರನ್‌ಟೈಮ್ ಹೊಂದಿದೆ. ಸಿನಿಮಾದ ಮುಂಗಡ ಬುಕ್ಕಿಂಗ್ ನವೆಂಬರ್ 5 ರಂದು ಪ್ರಾರಂಭವಾಲಿದೆ. ಅಂದರೆ ಚಿತ್ರ ಬಿಡುಗಡೆಗೆ ಒಂದು ವಾರ ಮುಂಚಿತವಾಗಿ ಬುಕಿಂಗ್ ಆರಂಭವಾಗಲಿದೆ. ವಿಶೇಷ ಅಂದ್ರೆ ಈ ಸಿನಿಮಾ ಭಾನುವಾರದಂದು ರಿಲೀಸ್ ಆಗುತ್ತಿದೆ.

Comments (0)
Add Comment