ದೆಹಲಿಯ ಸರ್ಕಾರಿ ಶಾಲೆ ಗೋಡೆ ಮೇಲೆ ಖಲಿಸ್ತಾನ ಪರ ಬರಹ ಪತ್ತೆ

ದೆಹಲಿ: ಸರ್ಕಾರಿ ಶಾಲೆಯ ಗೋಡೆಯ ಮೇಲೆ ಖಲಿಸ್ತಾನ ಪರ ಬರಹಗಳು ಪತ್ತೆಯಾದ ಘಟನೆ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.

ಪ್ರತ್ಯೇಕತಾವಾದಿ ಆಂದೋಲನವನ್ನು ಬೆಂಬಲಿಸುವಂತಹ ಘೋಷಣೆಗಳು ಈ ಸರ್ಕಾರಿ ಶಾಲೆಯ ಗೋಡೆ ಮೇಲೆ ಕಂಡುಬಂದಿದೆ ಎಂದು ದೆಹಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಈ ಬರಹವು ಎಸ್ ಜೆಎಫ್, ಖಲಿಸ್ತಾನ ಒಳಗೊಂಡಿರುವ ಬರಹಗಳು ಖಲಿಸ್ತಾನ ಉಗ್ರ ಹಾಗೂ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ (SFJ) ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುಗೆ ಸಂಬಂಧಪಟ್ಟಿರುವುದಾಗಿ ತಿಳಿದುಬಂದಿದೆ.

SFJ ಸಂಘಟನೆ ನಾಯಕ ಪನ್ನು ಗಣರಾಜ್ಯೋತ್ಸವ ದಿನಾಚರಣೆಯಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಇನ್ನು ಪನ್ನು ಯುನೈಟೆಡ್ ಸ್ಟೇಟ್ಸ್ ಹಾಗೂ ಕೆನಡಾ ದೇಶದ ಪೌರತ್ವವನ್ನು ಹೊಂದಿರುತ್ತಾನೆ.

Comments (0)
Add Comment