ದೆಹಲಿ, ಎನ್ ಸಿಆರ್ ನಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ

ದೆಹಲಿ: ದೆಹಲಿ, ಎನ್ ಸಿಆರ್ ನಲ್ಲಿಯೂ ಸಹ ಭೂಕಂಪ ಸಂಭವಿಸಿದೆ. ಇದರೊಂದಿಗೆ ಪಂಜಾಬ್, ಚಂಡೀಗಢ ಹಾಗೂ ಗಾಜಿಯಾಬಾದ್ ನಲ್ಲಿಯೂ ಇಂದು ಮಧ್ಯಾಹ್ನ 2.50ರ ಸುಮಾರಿಗೆ ಕಂಪನದ ಅನುಭವವಾಗಿದೆ.

ಈ ಭೂಕಂಪನದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂ ಖುಷ್ ವಲಯದಲ್ಲಿದೆ. ಈ ವಲಯದಲ್ಲಿ ಮಧ್ಯಾಹ್ನ 2.29ರ ಸುಮಾರಿಗೆ 213 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ, ಪಾಕಿಸ್ತಾನದ ಲಾಹೋರ್ ಮತ್ತು ಪೂಂಚ್ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದಿಂದ ಜನರಲ್ಲಿ ಭೀತಿ ಉಂಟಾಗಿದ್ದು, ಕಂಪನದಿಂದ ದೆಹಲಿ ಹಾಗೂ ಎನ್ ಸಿಆರ್ ನಲ್ಲಿ ಪೀಠೋಪಕರಣಗಳು ಅಲುಗಾಡಿದ ಅನುಭವ ಉಂಟಾಗಿದೆ ಎನ್ನಲಾಗಿದೆ.

Comments (0)
Add Comment