ದೆಹಲಿ ಹೈಕೋರ್ಟ್​​ಗೆ ಬಾಂಬ್​​​ ಬೆದರಿಕೆ – ಕೋರ್ಟ್​​ ಆವರಣದಲ್ಲಿ ಹೈ ಅಲರ್ಟ್​​

ದೆಹಲಿ: ದೆಹಲಿ ಹೈಕೋರ್ಟ್​​ಗೆ ಬಾಂಬ್​​​ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಇದೀಗ ದೆಹಲಿ ಹೈಕೋರ್ಟ್​​ ಆವರಣದಲ್ಲಿ ಹೈ ಅಲರ್ಟ್​​ ಮಾಡಲಾಗಿದೆ.

ಇದು ದೆಹಲಿಗೆ ಬಂದ ಎರಡನೇ ಬೆದರಿಕೆಯಾಗಿದ್ದು, ರಿಜಿಸ್ಟ್ರಾರ್ ಜನರಲ್‌ಗೆ ಮೇಲ್​​ ಮೂಲಕ ಬಾಂಬ್​​​ ಬೆದರಿಕೆ ಬಂದಿದೆ.

ಇನ್ನು ಬುಧವಾರ ತಡರಾತ್ರಿ ಈ ಮೇಲ್ ಬಂದಿದ್ದು, ಹೈಕೋರ್ಟ್​​​ ಮುಂದೆ ಬಾಂಬ್​​​ ಹಾಕಲಾಗುವುದು ಎಂದು ಇದರಲ್ಲಿ ತಿಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

 

Comments (0)
Add Comment