ದೇಶದಲ್ಲಿ ರಕ್ತ ದಾನ ಮಾಡಿದ ಮೊಟ್ಟ ಮೊದಲ ಶ್ವಾನ

ಹಾವೇರಿ: ರಕ್ತದಾನ ಶ್ರೇಷ್ಠ ದಾನ – ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಮಾತಿದೆ. ಆದರೆ ಇಲ್ಲೊಂದು ಮೂಕ ಪ್ರಾಣಿ ಇನ್ನೊಂದು ಪ್ರಾಣಿಗೆ ರಕ್ತ ನೀಡಿ ಜೀವ ಉಳಿಸಿದೆ. ಮಾತ್ರವಲ್ಲದೇ ದೇಶದಲ್ಲಿ ರಕ್ತ ದಾನ ಮಾಡಿದ ಮೊಟ್ಟ ಮೊದಲ ಶ್ವಾನ ಎಂಬ ಕೀರ್ತಿಗೂ ಪಾತ್ರವಾಗಿದೆ.

ಹಾವೇರಿ ಜಿಲ್ಲೆಯ ಹುಲ್ಲತ್ತಿ ಗ್ರಾಮದ ನಾಗರಾಜ್ ಗೊಲ್ಲರ ಸಾಕಿದ ರಾಕಿ ಶ್ವಾನಕ್ಕೆ ರಕ್ತ ಅವಶ್ಯಕತೆ ಇತ್ತು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗೆ ರಕ್ತವನ್ನು ನೀಡಿದಲ್ಲಿ ಮಾತ್ರ ಬದುಕುಳಿಸಬಹುದು ಎಂದು ಪಶುವೈದ್ಯರು ತಿಳಿಸಿದ್ದರು.

ಹಲವು ನಾಯಿಗಳಿಂದ ಪರೀಕ್ಷೆ ಮಾಡಿಸಲಾಯಿತಾದರೂ ರಕ್ತದ ಹೊಂದಾಣಿಕೆ ಆಗಲಿಲ್ಲ. ಹೀಗಾಗಿ ನಾಯಿಗೆ ರಕ್ತದಾನ ಮಾಡಿಸಲು ಸಾಕು ನಾಯಿಗಳ ಮಾಲೀಕರು ಇಚ್ಛೆ ತೋರಿಸಿದಲ್ಲಿ ತಮ್ಮನ್ನು ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಶ್ವಾಸ್ನ ಮಾಲಕರು ಮನವಿ ಮಾಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಮನವಿಯನ್ನು ನೋಡಿದ ಬೊಮ್ಮನಹಳ್ಳಿ ಗ್ರಾಮದ ರಂಜಿತ ತಮ್ಮ ಶ್ವಾನದ ರಕ್ತದಾನ ಮಾಡಿಸಲು ಮುಂದೆ ಬಂದಿದ್ದಾರೆ. ಹಾನಗಲ್ ತಾಲೂಕಿನ ಅಕ್ಕಿಆಲೂರಿನ ಆಸ್ಪತ್ರೆಗೆ ಕರೆತಂದು ಪರೀಕ್ಷಿಸಿದಾಗ ರಂಜಿತಾ ಅವರ ನಾಯಿ ಸಿರಿ ರಕ್ತ ಅನಾರೋಗ್ಯದ ಹೊಂದಿದ ಶ್ವಾನಕ್ಕೆ ಹೊಂದಾಣಿಕೆಯಾಗಿದೆ. ನಂತರ, ಸಿರಿ ನಾಯಿಯಿಂದ ರಕ್ತವನ್ನು ಸಂಗ್ರಹ ಮಾಡಿ ನಂತರ, ಅನಾರೋಗ್ಯದಿಂದ ಬಳಲುತ್ತಿದ್ದ ನಾಯಿಗೆ ಹಾಕಲಾಗಿದೆ.

ಈ ಮೂಲಕ “ಸಿರಿ” ದೇಶದಲ್ಲಿ ರಕ್ತ ದಾನ ಮಾಡಿದ ಮೊಟ್ಟ ಮೊದಲ ನಾಯಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಶ್ವಾನಕ್ಕೆ ರಕ್ತ ನೀಡಲಾಗಿದ್ದು, ಶೀಘ್ರ ಚೇತರಿಕೆ ಕಾಣಲಿದೆ ಎಂದು ವೈದ್ಯರು ಹೇಳಿದ್ದಾರೆ.

Comments (0)
Add Comment