ನಂಗ್‌ ಮೀನಿನ ತವಾ ಫ್ರೈ ಮಾಡುವ ವಿಧಾನ

ಇಂಗ್ಲಿಷ್‌ನಲ್ಲಿ ಮಲ್ಬಾರ್ ಸೋಲೆ (Malbar Sole Fish) ಎಂದು ಕರೆಯಲ್ಪಡುವ ಮೀನನ್ನು ಮಂಗಳೂರು ಕಡೆ ನಂಗ್‌ ಎಂದು ಕರೆಯಲಾಗುವುದು. ಇನ್ನು ಕೇರಳದಲ್ಲಿ ಮಾಂದಲ್‌ ಎಂದು, ತಮಿಳುನಾಡಿನಲ್ಲಿ ನಾಕು ಮೀನು ಎಂದು ಕರೆಯುತ್ತಾರೆ.
ಒಣ ಮೀನು ಇಷ್ಟ ಪಡುವವರಿಗೆ ಈ ಮೀನು ತುಂಬಾನೇ ಇಷ್ಟವಾಗುತ್ತದೆ. ಇನ್ನು ಹಸಿಯಾದರೂ ಕೂಡ ಇದನ್ನು ಫ್ರೈ ಮಾಡಿದರೆ ಅಥವಾ ಪುಳಿಮುಂಜಿ ಅಂದ್ರೆ ಮೆಣಸು, ಹುಳಿ ಹಾಕಿ ತಯಾರಿಸಿದರೂ ಸೂಪರ್‌ ಆಗಿರುತ್ತದೆ.

ಮಾಡುವ ವಿಧಾನ:

1.ಮೆಣಸು, ಹುಣಸೆ ರಸ, ಉಪ್ಪು, ಅರಿಶಿಣ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಾಗಿರಲಿ. ಅದರಲ್ಲಿ ನಂಗ್‌ ಮೀನನ್ನು ಹಾಕಿ, ಮೀನಿಗೆ ಮಸಾಲೆ ಹಚ್ಚಿ
2.ಮಸಾಲೆ ಹಚ್ಚಿ 2 ತಾಸು ಇಟ್ಟರೆ ಮೀನು ಮಸಾಲೆ ಹೀರಿ ಕೊಂಡಿರುತ್ತದೆ.
3.ಈಗ ತವಾಕ್ಕೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಗ್ಯಾಸ್‌ ಉರಿ ಕಡಿಮೆ ಮಾಡಿ ಅದರಲ್ಲಿ ಮೀನು ಹಾಕಿ ಒಂದೊಂದು ಬದಿ 5-6 ನಿಮಿಷ ಬೇಯಿಸಿ
4. ಬೇಕಿದ್ದರೆ ಸ್ವಲ್ಪ ನಿಂಬೆರಸ ಕೂಡ ಹಾಕಿದರೆ ಸವಿಯಲು ನಂಗ್‌ ಮೀನು ಫ್ರೈ ರೆಡಿ.

 

Comments (0)
Add Comment