ನಕಲಿ ಮೈಸೂರ್ ಸ್ಯಾಂಡಲ್ ಸೋಪು ತಯಾರಿಕೆ : ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಲು ಸಿ.ಎಂ ಸೂಚನೆ

ಬೆಂಗಳೂರು: ಹೈದರಾಬಾದ್‌ ನಲ್ಲಿ ನಕಲಿ ಮೈಸೂರ್ ಸ್ಯಾಂಡಲ್ ಸೋಪು ತಯಾರಿಸಿ ಇಬ್ಬರು ಸಿಕ್ಕಿಬಿದ್ದಿದ್ದು ಅವರನ್ನು ಈಗಾಗಲೇ ಬಂಧಿಸಿದ್ದೇವೆ. ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸಲಹೆಯನ್ನು ನೀಡಿದ್ದಾರೆ.

ವಿಧಾನಸೌಧದದಲ್ಲಿ ನಡೆದ ಕೆಎಸ್​​ಡಿಎಲ್​ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಣಮಟ್ಟ ಇಲ್ಲದಿದ್ದರೆ ಕೆಟ್ಟ ಹೆಸರು ಬರುತ್ತೆ. ನಮ್ಮ ಸರ್ಕಾರ ಬಂದು 8 ತಿಂಗಳ ಅವಧಿಯಲ್ಲಿ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಕಂಪನಿಯ ಮಾರಾಟ ಹೆಚ್ಚಳ ಮಾಡಲಾಗಿದೆ. ಆಗ ಗಂಧದ ಫ್ಯಾಕ್ಟರಿ ಅಂತ ಕರೆಯಲಾಗುತ್ತಿತ್ತು. ನಂತರ ಸೋಪ್ಸ್ ಆ್ಯಂಡ್ ಡಿಟರ್ಜಂಟ್ ಅಂತ ಆಯಿತು. ತದನಂತರ ಮೈಸೂರು ಆ್ಯಂಡ್ ಡಿಟರ್ಜಂಟ್ ಅಂತ ಆಗುತ್ತೆ. ಈ ಹಿಂದೆ ಕೇವಲ ಗಂಧದ ಎಣ್ಣೆ ತಯಾರಿಕೆ ಮಾಡಲಾಗುತ್ತಿತ್ತು. ಈಗ ಜೆಲ್ ಹೆಚ್ಚು ಬೇಡಿಕೆಯಲ್ಲಿದೆ. ಯುವಕರು ಹೆಚ್ಚು ಬಳಕೆ ಮಾಡುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ ಮಾಡುವುದು ಅವಶ್ಯ ಎಂದು ಹೇಳಿದರು

ಜನರ ಅಭಿರುಚಿಗೆ ತಕ್ಕಂತೆ ತಯಾರಿ ಮಾಡಿ ಅಂತ ಸಲಹೆ ನೀಡಿದ್ದು, ಹೊಸ ಉತ್ಪನ್ನದ ಪ್ರಯೋಗ ಜನ ಪಡೆದುಕೊಳ್ಳಬೇಕು. ಮೈಸೂರು ಸೋಪ್ಸ್ ಆ್ಯಂಡ್​ ಡಿಟರ್ಜಂಟ್ ಸಿಬ್ಬಂದಿಗಳಿಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದು, ಹೆಚ್ಚು ಜನಪ್ರಿಯ ಆಗಲಿ ಎಂದು ಹೇಳಿದ್ದಾರೆ.

Comments (0)
Add Comment