‘ನನ್ನ ಪತಿ ಅರವಿಂ ದ ಕೇ ಜ್ರಿವಾಲ್ ನಾಳೆ ನ್ಯಾಯಾಲಯದಲ್ಲಿ ಸತ್ಯವನ್ನು ಬಹಿರಂಗಪಡಿಸಲಿದ್ದಾರೆ’- ಸುನೀತಾ ಕೇಜ್ರಿವಾಲ್

ನವದೆಹಲಿ: ನಮ್ಮ ನಿವಾಸದ ಮೇಲೆ ಜಾರಿ ನಿರ್ದೇ ಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದ ಸಂದರ್ಭದಲ್ಲಿ ಯಾವುದೇ ರೀತಿಯ ಹಣ ಪತ್ತೆಯಾಗಿಲ್ಲ ಎಂದು ದೆಹಲಿ ಮುಖ್ಯಮಂ ತ್ರಿ ಅರವಿಂ ದ ಕೇ ಜ್ರಿವಾಲ್ ಅವರ ಪತ್ನಿ ಸುನೀತಾ ಕೇ ಜ್ರಿವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿ ಅಬಕಾರಿ ನೀತಿ ಹಗರಣ ಜೊತೆ ನಂಟಿರುವ ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನನ್ನ ಪತಿ ಅರವಿಂದ ಕೇ ಜ್ರಿವಾಲ್ ನಾಳೆ ನ್ಯಾಯಾಲಯದಲ್ಲಿ ಸತ್ಯವನ್ನು ಬಹಿರಂಗಪಡಿಸಲಿದ್ದಾರೆ ಎಂದು ಹೇಳಿದ್ದಾರೆ.

ಅರವಿಂದ ಕೇಜ್ರಿವಾಲ್ ಅವರು ಎರಡು ದಿನಗಳ ಹಿಂದೆ ದೆಹಲಿಯಲ್ಲಿನ ನೀ ರು ಮತ್ತು ಒಳಚರಂಡಿ ಸಮಸ್ಯೆಗಳ ಬಗ್ಗೆ ಜಲ ಖಾತೆ ಸಚಿವೆ ಅತಿಶಿ ಅವರಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾ ರ ಅವರ ವಿರುದ್ಧ ಕೇ ಸ್ ದಾಖಲಿಸಿದೆ. ಬಿಜೆಪಿಯವರಿಗೆ ದೆಹಲಿಯನ್ನು ನಾಶಮಾಡಬೇಕೆ?, ಜನರು ಸಂಕಷ್ಟದಲ್ಲಿ ಇರಬೇಕೆಂದು ಬಿಜೆಪಿಗರು ಬಯಸುತ್ತಾರೆಯೇ ? ಎಂದು ಪ್ರಶ್ನಿಸಿರುವ ಸುನೀತಾ, ಬಿಜೆಪಿಯವರ ನಡೆ ಬಗ್ಗೆ ಅರವಿಂದ ಕೇಜ್ರಿವಾಲ್ ಅವರಿಗೆ ತುಂಬಾ ನೋವಾಗಿದೆ ಎಂದು ಹೇಳಿದರು.

ಅಬಕಾರಿ ನೀತಿ ಹಗರಣಕ್ಕೆ ಸಂ ಬಂ ಧಿಸಿ ಇ.ಡಿ ಅಧಿಕಾರಿಗಳು 250ಕ್ಕೂ ಹೆಚ್ಚು ಕಡೆ ದಾಳಿ ನಡೆಸಿದ್ದು, ಅಧಿಕಾರಿಗಳು ಹಣಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಹಣ ಸೇರಿದಂ ತೆ ಏನೂ ಸಿಕ್ಕಿಲ್ಲ. ಅಬಕಾರಿ ನೀ ತಿ ಹಗರಣದ ಹಣ ಎಲ್ಲಿದೆ ಎಂಬುದನ್ನು ನ್ಯಾಯಾಲಯದಲ್ಲಿ ನನ್ನ ಪತಿ ಬಹಿರಂಗಪಡಿಸಲಿದ್ದು, ಪುರಾವೆಗಳನ್ನು ನೀಡಲಿದ್ದಾರೆ ಎಂದು ಸುನೀತಾ ತಿಳಿಸಿದ್ದಾರೆ.

ಕೇಜ್ರಿವಾಲ್ ಅವರನ್ನು ಇ.ಡಿ ಅಧಿಕಾರಿಗಳು ಮಾರ್ಚ್‌ 21ರಂದು ಬಂಧಿಸಿದ್ದರು. ನಂತರ, ದೆಹಲಿ ಹೈಕೋ ರ್ಟ್‌ ಅವರನ್ನು ಇ.ಡಿ ವಶಕ್ಕೆ ನೀಡಿದೆ

Comments (0)
Add Comment