ನಮ್ಮದು ಜಾತ್ಯತೀತವಾದ ಮಠ: ಶ್ರೀ ಶಿವಲಿಂಗಾನಂದ ಶ್ರೀಗಳು

 

ಚಿತ್ರದುರ್ಗ: ನಮ್ಮದು ಜಾತಿ ಮಠವಲ್ಲ, ಜಾತ್ಯತೀತವಾದ ಮಠವಾಗಿದೆ ಇಲ್ಲಿಗೆ ಬರುವವರೆಲ್ಲರನ್ನು ಸಹಾ ನಾವು ಗೌರವದಿಂದ ಕಾಣುತ್ತೇವೆ ನಮ್ಮಲ್ಲಿ ಯಾವುದೇ ರೀತಿಯ ಜಾತಿಯ ಸೂಂಕು ಇಲ್ಲ ಇಲ್ಲಿ ಎಲ್ಲರೂ ಸಹಾ ಒಂದೇ ಎಂದು ಶ್ರೀ ಸದ್ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಕಳೆದ 4 ರಿಂದ 9ವರಗೆ ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ನಡೆದ 94ನೇ ಮಹಾ ಶಿವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಇಂದಿನ ದಿನಮಾನದಲ್ಲಿ ನಾಡಿನಲ್ಲಿ ಜಾತಿಗೊಂದು ಮಠ ಇದೆ. ಆದರೆ ನಮ್ಮ ಆಶ್ರಮ ಯಾವುದೇ ಜಾತಿಗೆ ಸೇರಿಲ್ಲ ಇಲ್ಲ ಎಲ್ಲಾ ಜಾತಿಯವರು ಸಹಾ ಭಕ್ತರಾಗಿದ್ದಾರೆ. ಇಲ್ಲಿ ಎಲ್ಲವರು ಸಹಾ ನಮ್ಮವರೆ ಆಗಿದ್ಧಾರೆ, ಇಲ್ಲಿ ಸಿದ್ದಾರೂಢ ಅಜ್ಜನವರ ಸೇವೆಯೊಂದೆ ಗುರಿಯಾಗಿದೆ. ನಮ್ಮಲ್ಲಿ ಅನ್ನದಾಸೋಹ, ಜ್ಞಾನದಾಸೋಹ ಹಾಗೂ ಧರ್ಮದಾಸೋಹ ಮಾಡಲಾಗುತ್ತಿದೆ. ಈ ಎಲ್ಲಾ ಕಾರ್ಯಕ್ರಮವೂ ಸಿದ್ದಾರೂಢ ಶ್ರೀಗಳ ತಪ್ಪಸ್ಸಿನ ಮಹಿಮೆಯಿಂದ ನಡೆಯುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಈ ಆಶ್ರಮ ಗೋಶಾಲೆಯನ್ನು ನಡೆಸುವ ಸಲುವಾಗಿ ಬಂದವರಾಗಿದ್ದಾರೆ. ಸಿದ್ದರೂಢರು ಗೋಸಂಪತ್ತನ್ನು ರಕ್ಷಣೆ ಮಾಡಲು ಬಂದವರಾಗಿದ್ದರು, ಇಲ್ಲಿ ಮಠವನ್ನು ನಿರ್ಮಾಣ ಮಾಡಬೇಕೆಂದು ಬಂದವರಲ್ಲ, ಇಲ್ಲಿಗೆ ಬರುವವರನ್ನು ನಿಮ್ಮ  ಜಾತಿ ಯಾವುದೆಂದು ಕೇಲಿದವರಲ್ಲ, ಇಲ್ಲಿ ಎಲ್ಲವರು ಸಹಾ ನಮ್ಮವರೆ ಆಗಿದ್ದಾರೆ. ಮಕ್ಕಳಿಗೆ ಅಕ್ಷರ ಜ್ಞಾನವನ್ನು ನೀಡುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿ ವ್ಯವಹಾರಿಕವಾಗಿ ಏನು ಇಲ್ಲ ಎಲ್ಲವನ್ನು ಸಹಾ ಉತ್ತಮ ದೃಷ್ಟಿಯಿಂದ ಮಾಡಲಾಗುತ್ತಿದೆ. ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಸಹಾ ಕಲಿಸಲಾಗುತ್ತಿದೆ. ನಮ್ಮ ದೈನಂದಿನ ಚಟುವಟಿಕೆಯಲ್ಲಿ ವನಸ್ಸನ್ನು ಕ್ರೋಢಿಕರಿಸಿಕೊಂಡು ವಿವಿಧ ರೀತಿಯಲ್ಲಿ ಚಿಂತನೆ ಮಾಡುವುದನ್ನು ನಿಲ್ಲಿಸಬೇಕಿದೆ ಎಂದು ಶ್ರೀಗಳು ಭಕ್ತರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇಲಕಲ್ಲನ ಅವದೂರ ಮಠದ ಮಾತೋಶ್ರೀ ಶರಣಮ್ಮತಾಯಿ, ಕೃಷ್ಣಾನಂದ ಶ್ರೀಗಳು, 94ನೇ ಶಿವರಾತ್ರಿ ಮಹೋತ್ಸವ ಸಮಿತಿಯ ಉಪಾಧ್ಯಕ್ಷರಾದ ಸಿದ್ದವ್ವನಹಳ್ಳಿ ಪರಮೇಶ್, ಸದಸ್ಯರಾದ ಓಂಕಾರ್, ಉತ್ಸವ ಸಮಿತಿ ಗೋಪಾಲಸ್ವಾಮಿ ನಾಯ್ಕ್,ನಗರಸಭಾ ಸದಸ್ಯರಾದ ವೆಂಕಟೇಶ್ ಭಾಗವಹಿಸಿದ್ದರು. ಸುಮನ ಪ್ರಾರ್ಥಿಸಿದರೆ ಈರಣ್ಣ ಸ್ವಾಗತಿಸಿದರು ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನಮ್ಮದು ಜಾತ್ಯತೀತವಾದ ಮಠ: ಶ್ರೀ ಶಿವಲಿಂಗಾನಂದ ಶ್ರೀಗಳು
Comments (0)
Add Comment