‘ನಮ್ಮ ರಾಮ ಬಂದಿದ್ದಾನೆ, ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ವಿರಾಜಮಾನನಾಗಿದ್ದಾನೆ’- ಪ್ರಧಾನಿ ಮೋದಿ ಸಂತಸ

ಅಯೋಧ್ಯೆ : ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್​​ನಲ್ಲಿ ಇರಲ್ಲ . ನಮ್ಮ ರಾಮಲಲ್ಲಾ ದಿವ್ಯ ಮಂದಿರದಲ್ಲಿ ಇರುತ್ತಾನೆ. ಈ ಕ್ಷಣ ಅತ್ಯಂತ ಪವಿತ್ರವಾದದ್ದು, ಕಡೆಗೂ ನಮ್ಮ ರಾಮ ಬಂದಿದ್ದಾನೆ. ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ವಿರಾಜಮಾನನಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸವನ್ನು ಹಂಚಿಕೊಂಡರು.

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಬೃಹತ್‌ ವೇದಿಕೆ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು . ಕೊನೆಗೂ ನಮ್ಮ ರಾಮ ಬಂದಿದ್ದಾನೆ. ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ನೆಲೆಸಿದ್ದಾನೆ ಎಂದು ಬಣ್ಣಿಸಿದ್ದಾರೆ.

ಈ ಶುಭ ಸಂದರ್ಭದಲ್ಲಿ ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹೇಳಲು ತುಂಬಾ ವಿಷಯಗಳಿವೆ. ಆದ್ರೆ ಸಂತಸದಿಂದ ನನಗೆ ಮಾತೇ ಬರುತ್ತಿಲ್ಲ. ಇನ್ಮುಂದೆ ನಮ್ಮ ರಾಮ ಟೆಂಟ್‌ನಲ್ಲಿ ವಾಸಿಸುವುದಿಲ್ಲ, ಅದ್ಧೂರಿ ದೇವಾಲಯದಲ್ಲಿ ವಿರಾಜಮಾನನಾಗಿರುತ್ತಾನೆ. ಈ ಸಮರ್ಪಣೆಯ ಕ್ಷಣವು ಭಗವಾನ್ ರಾಮನ ಆಶೀರ್ವಾದ ಎಂದು ಹೊಗಳಿದರು.

ಜನವರಿ 22, ಕ್ಯಾಲೆಂಡರ್‌ನಲ್ಲಿ ಬರುವ ದಿನಾಂಕವಲ್ಲ. ಇದು ಹೊಸ ಯುಗದ ಉದಯ ಎಂದು ಕೊಂಡಾಡಿದರು. ಜೊತೆಗೆ ಜನವರಿ 22ರಂದು ಸಂಜೆ ಪ್ರತಿಯೊಬ್ಬ ರಾಮಭಕ್ತರ ಮನೆಯಲ್ಲೂ ʻಶ್ರೀರಾಮಜ್ಯೋತಿʼ ಬೆಳಗಿಸುವಂತೆ ಕರೆ ನೀಡಿದರು.

ವರ್ಷಗಳ ಹೋರಾಟದ ಬಳಿಕ ರಾಮ ಬಂದಿದ್ದಾನೆ.ಈ ಶುಭ ಘಳಿಗೆಯಲ್ಲಿ ಎಲ್ಲರಿಗೂ ಶುಭಾಶಯ ಎಂದಿದ್ದಾರೆ.ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸದ ಉದಯವಾಗಲಿದೆ. ದೇಶದಲ್ಲಿ ಇಂದು ಪ್ರತಿದಿನವೂ ಒಂದು ವಿಶ್ವಾಸ ಮೂಡುತ್ತಿದೆ. ಈ ಕ್ಷಣ ದೈವಿಕ ಅನುಭವವನ್ನು ಪಡೆಯುತ್ತಿದ್ದೇನೆ. ಪ್ರಭು ಶ್ರೀರಾಮನ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಇಷ್ಟು ವರ್ಷಗಳ ಕಾಲ ನಾವು ಸಮಯ ತೆಗೆದುಕೊಂಡಿದ್ದಕ್ಕೆ ಕ್ಷಮೆಯಾಚಿಸುವೆ. ಪ್ರಭು ಶ್ರೀರಾಮನ ಆಗಮನದಿಂದ ಇಡೀ ದೇಶ ಸಂಭ್ರಮಗೊಂಡಿದೆ ಎಂದರು.

Comments (0)
Add Comment