ನಾಂಪಲ್ಲಿಯಲ್ಲಿ ಹಳಿ ತಪ್ಪಿದ ಚಾರ್​ಮಿನಾರ್​ ಎಕ್ಸ್​ಪ್ರೆಸ್ ರೈಲು

ತೆಲಂಗಾಣ: ತೆಲಂಗಾಣದ ನಾಂಪಲ್ಲಿ ರೈಲು ನಿಲ್ದಾಣದಲ್ಲಿ ಬುಧವಾರ ಚಾರ್ಮಿನಾರ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ಐದಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ರೈಲು ನಿಲ್ದಾಣವು ರೈಲುಗಳು ಕೊನೆಗೊಳ್ಳುವ ಟರ್ಮಿನಲ್ ನಿಲ್ದಾಣದಲ್ಲಿ ಬೆಳಗ್ಗೆ 9:15ರ ಸುಮಾರಿಗೆ ಈ ಘಟನೆ ನಡೆದಿದೆ. ಹಳಿಗಳು ಮುಕ್ತಾಯಗೊಳ್ಳುವ ಮೊದಲೇ ರೈಲು ನಿಲ್ಲಬೇಕಿತ್ತು. ಆದರೆ ಇದು ಮುಂದುವರಿದಿದ್ದು ಕೊನೆಗೆ ಹಳಿತಪ್ಪಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ.. ಘಟನೆಯಲ್ಲಿ ರೈಲಿನ ಬಾಗಿಲ ಬಳಿ ನಿಂತಿದ್ದ ಸುಮಾರು ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಚೆನ್ನೈನಿಂದ ಹೈದರಾಬಾದ್‌ಗೆ ಬರುತ್ತಿದ್ದ ಚಾರ್ಮಿನಾರ್ ಎಕ್ಸ್‌ಪ್ರೆಸ್ ನಾಂಪಲ್ಲಿ ರೈಲಿನ ಮೂರು ಭೋಗಿಗಳು ನಿಲ್ದಾಣದಲ್ಲಿ ಹಳಿತಪ್ಪಿದೆ. ಅಪಘಾತದ ನಂತರ ಅಲ್ಲಿ ಪರಿಹಾರ ಮತ್ತು ದುರಸ್ತಿ ಕಾರ್ಯಗಳು ನಡೆಯುತ್ತಿವೆ. ರೈಲ್ವೆ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

Comments (0)
Add Comment