ನೇಪಾಳದಲ್ಲಿ ಭಾರೀ ಭೂಕಂಪ : 69 ಮಂದಿ ಸಾವು

ನೇಪಾಳ : ನೇಪಾಳದ ಜಜಾರ್​ಕೋಟ್​ನ ಪಶ್ಚಿಮ ಭಾಗದಲ್ಲಿ ಶುಕ್ರವಾರ ಸಂಭವಿಸಿದ ಭಾರೀ ಭೂಕಂಪನಿಂದ ೬೯ ಜನ ಸಾವನ್ನಪ್ಪಿದ್ದಾರೆ. ಇನ್ನು ಭೂಕಂಪನ ತೀವ್ರತೆ 6.4 ದಾಖಲಾಗಿದೆ. ಇದು ಬೆಟ್ಟ-ಗುಡ್ಡಪ್ರದೇಶವಾಗಿದ್ದು ಸುಮಾರು 19 ಲಕ್ಷ ಜನಸಂಖ್ಯೆ ಹೊಂದಿದೆ. ಜಜಾರ್​​ಕೋಟ್ ಜಿಲ್ಲೆಯಲ್ಲಿ 34 ಮಂದಿ ಹಾಗೂ ಪಕ್ಕದ ಪಶ್ಚಿಮ ರುಕುಮ್ ಜಿಲ್ಲೆಯಲ್ಲಿ 35 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ. ನೇಪಾಳ ಪ್ರಧಾನಿ ಘಟನೆಗೆ ಸಂತಾಪ ಸೂಚಿಸಿದ್ದು ದೇಶದ 3 ಭದ್ರತಾ ಏಜೆನ್ಸಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆ. ಜಜಾರ್​​​ಕೋಟ್​​ ಕಠ್ಮಂಡುವಿನಿಂದ ಸುಮಾರು 500 ಕಿಲೋ ಮೀಟರ್ ದೂರದಲ್ಲಿದೆ. ನೇಪಾಳ ಭಾಗದಲ್ಲಿ ಅಕ್ಟೋಬರ್ 3 ರಿಂದ ಭೂಕಂಪ ಸಂಭವಿಸುತ್ತಲೇ ಇದೆ. ಅದರ ಪರಿಣಾಮ ಉತ್ತರ ಭಾರತ ಮತ್ತು ದೆಹಲಿ ಎನ್​ಸಿಆರ್ ಪ್ರದೇಶದಲ್ಲೂ ೪೦ ಸೆಕೆಂಡುಗಳ ಕಾಲ ಕಂಪನದ ಅನುಭವವಾಗಿದೆ.

Comments (0)
Add Comment