ನ್ಯೂ ಇಯರ್ ಪಾರ್ಟಿಗೆ ಸೇಲ್ ಮಾಡಲು ಇಟ್ಟಿದ್ದ 21 ಕೋಟಿ ಮೌಲ್ಯದ ಡ್ರಗ್ಸ್ ವಶ – ವಿದೇಶಿ ಪ್ರಜೆ ಅರೆಸ್ಟ್

ಬೆಂಗಳೂರು : ನ್ಯೂ ಇಯರ್ ಪಾರ್ಟಿಗೆ ಸೇಲ್ ಮಾಡಲು ಇಟ್ಟಿದ್ದ 21 ಕೋಟಿ ಮೌಲ್ಯದ ಡ್ರಗ್ಸ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಓರ್ವ ವಿದೇಶಿ ಪ್ರಜೆಯನ್ನು ಅರೆಸ್ಟ್ ಮಾಡಿದ್ದಾರೆ. ನಗರದ ಸಿಸಿಬಿ‌ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಲಿಯೋನಾರ್ಡ್ ಓಕ್ವುಡಿಲಿ ಬಂಧಿತ ಆರೋಪಿ. ಬಂಧಿತನಿಂದ 21 ಕೋಟಿ ಮೌಲ್ಯದ 16 ಕೆಜಿ ಎಂಡಿಎಂಎ, 500 ಗ್ರಾಂ ಕೊಕೆನ್ ಜಪ್ತಿ ಮಾಡಲಾಗಿದೆ. ಹೊಸ ವರ್ಷಾಚರಣೆಗೆ ಇನ್ನು ಕೆಲವೇ ದಿನಗಳಿದ್ದು ಈ ಹಿನ್ನಲೆ ಡಿಸೆಂಬರ್ 31ರಂದು ರಾತ್ರಿ ‌ಹೊಸ ವರ್ಷಾಚರಣೆಗೆ ಹಲವೆಡೆ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ. ಕೆಲ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸಲು ಆರೋಪಿ ಸಜ್ಜಾಗಿದ್ದ’ ಎಂದು ಕಮಿಷನರ್ ಬಿ.ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯುಸಿನೆಸ್ ವೀಸಾ ಮೇಲೆ ಬೆಂಗಳೂರಿಗೆ ಬಂದು ರಾಮಮೂರ್ತಿನಗರದಲ್ಲಿ ನೆಲೆಸಿದ್ದ ಆಫ್ರಿಕಾ ಮೂಲದ ಲಿಯೋನಾರ್ಡ್ ಎಂಬ ಆರೋಪಿ ಹೊಸ ವರ್ಷಕ್ಕೆ ಮತ್ತೇರಿಸಲು ಅಪಾರ ಪ್ರಮಾಣದ ಡ್ರಗ್ಸ್​ ತಂದಿದ್ದ. ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ‘ಬಂಧಿತ ಆರೋಪಿ, ಪೆಡ್ಲರ್ ಆಗಿದ್ದಾನೆ. ತನ್ನದೇ ತಂಡ ಕಟ್ಟಿಕೊಂಡು ಡ್ರಗ್ಸ್ ಮಾರುತ್ತಿದ್ದ. ಈತನಿಂದ 16 ಕೆ.ಜಿ ಎಂಡಿಎಂಎ, 500 ಗ್ರಾಂ ಕೊಕೇನ್, ಮೂರು ತೂಕದ ಯಂತ್ರ, ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಅವರು ಹೇಳಿದರು.

Comments (0)
Add Comment