ಪಂಚರಾಜ್ಯ ಚುನಾವಣೆಯಲ್ಲಿ ಸೋಲುಂಡ ಕಾಂಗ್ರೆಸ್- ಲೋಕಸಭಾ ಚುನಾವಣೆಗೆ ಸಜ್ಜು

ಹೊಸದಿಲ್ಲಿ:  ಇತ್ತೀಚಿನ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದ್ದು ‌, ರಾಜಸ್ಥಾನ ಹಾಗೂ ಮಿಜೋರಾಂ ರಾಜ್ಯಗಳ ಸೋಲಿನ ಕುರಿತು ಶನಿವಾರ ಪರಾಮರ್ಶೆ ನಡೆಸಿದೆ.

ಈ ಎರಡು ರಾಜ್ಯಗಳಲ್ಲಿ ಸೋತರೂ, ಗೆದ್ದವರು ಮತ್ತು ಸೋತವರ ನಡುವಿನ ಮತಗಳ ಅಂತರ ಬಹಳವಿಲ್ಲ ಎಂಬುದನ್ನು ಪ್ರಮುಖವಾಗಿ ಗಮನಿಸಿರುವ ಪಕ್ಷ, ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದೆ.

ಶನಿವಾರ ರಾಜಸ್ಥಾನ ಮತ್ತು ಮಿಜೋರಾಂ ರಾಜ್ಯಗಳ ಪಕ್ಷದ ಹಿರಿಯರ ನಾಯಕರ ಜೊತೆಗೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪಕ್ಷದ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಈ ರಾಜ್ಯಗಳಲ್ಲಿನ ಕಾಂಗ್ರೆಸ್‌ ಉಸ್ತುವಾರಿಗಳು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಇಂಥದ್ದೊಂದು ಅಭಿಪ್ರಾಯ ವ್ಯಕ್ತವಾಗಿದೆ.

ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯ ವೇಳೆ 5 ರಾಜ್ಯಗಳಲ್ಲಿ ಬಿಜೆಪಿ ಒಟ್ಟು 4,92,15,575 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ 4,81,64,849 ಮತ ಪಡೆದಿತ್ತು. ಅಂದರೆ ಎರಡೂ ಪಕ್ಷಗಳು ಪಡೆದ ಮತಗಳ ನಡುವಿನ ಅಂತರ ಕೇವಲ 10 ಲಕ್ಷ. ರಾಜಸ್ಥಾನದಲ್ಲಿ ಬಿಜೆಪಿ ಶೇ. 41.69 ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‌ 39.53 ರಷ್ಟು ಮತ ಪಡೆದಿತ್ತು. ಮಿಜೋರಾಂನಲ್ಲಿ ಬಿಜೆಪಿ ಶೇ. 5.06 ರಷ್ಟು ಮತ ಪಡೆದಿದ್ದರೆ, ಕಾಂಗ್ರೆಸ್‌ ಶೇ. 20.82 ರಷ್ಟು ಮತ ಪಡೆದಿತ್ತು.ಗೆದ್ದವರು ಮತ್ತು ಸೋತವರ ನಡುವಿನ ಮತಗಳ ಅಂತರ ಬಹಳವಿಲ್ಲ ಎಂಬುದನ್ನು ಗಮನಿಸಿ ಲೋಕಸಭಾ ಚುನಾವಣೆಗೆ ಸಜ್ಜಾಗಲು ನಿರ್ಧರಿಸಿದೆ.

Comments (0)
Add Comment