ಪನ್ನುನ್ ಹತ್ಯೆಗೆ ಸಂಚಿನಲ್ಲಿ ಬಂಧಿತನಾಗಿದ್ದ ನಿಖಿಲ್ ಗುಪ್ತಾ ಪರ ಸುಪ್ರಿಂಗೆ ಅರ್ಜಿ

ನವದೆಹಲಿ: ಖಲಿಸ್ತಾನ್​ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್​ನನ್ನು ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಪರವಾಗಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ಆತನನ್ನು ಜೆಕ್ ಗಣರಾಜ್ಯದ ಜೈಲಿನಿಂದ ಬಿಡುಗಡೆ ಮಾಡಲು ಭಾರತ ಸರ್ಕಾರದ ಮಧ್ಯಸ್ಥಿಕೆಯನ್ನು ಕೋರಲಾಗಿ ಎಂದು ಲೈವ್ ಲಾ ವರದಿ ಮಾಡಿದೆ.

ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತ ಅಮೆರಿಕ ಪ್ರಜೆಯೊಬ್ಬನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಅಮೆರಿಕ ಆರೋಪಿಸಿದೆ. ಪನ್ನುನ್‌ನನ್ನು ಗುರಿಯಾಗಿಸಿಕೊಂಡು ‘ಬಾಡಿಗೆಗಾಗಿ ಕೊಲೆ’ ಸಂಚಿನಲ್ಲಿ ಗುಪ್ತಾ ಭಾಗಿಯಾಗಿದ್ದಾನೆಂದು ಆರೋಪಿಸಿ ಜೂನ್ 20 ರಂದು ಗುಪ್ತಾ ಅವರನ್ನು ಜೆಕ್ ಗಣರಾಜ್ಯದಲ್ಲಿ ಬಂಧಿಸಲಾಯಿತು. ಇದೀಗ ನಿಖಿಲ್ ಗುಪ್ತಾ ಹಸ್ತಾಂತರಕ್ಕಾಗಿ ಅಮೆರಿಕಾ ಕಾಯುತ್ತಿದೆ. ಆತ ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಸಂಚು ರೂಪಿಸಿದ್ದ ಅಂತ ಅಮೆರಿಕ ಆರೋಪಿಸಿದೆ.

ಜೆಕ್ ಗಣರಾಜ್ಯದ ನ್ಯಾಯ ಸಚಿವಾಲಯವು ನಿಖಿಲ್ ಗುಪ್ತಾ ಬಂಧನ ವನ್ನು ಖಚಿತಪಡಿಸಿದ್ದು, ಅಮೆರಿಕದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿತ್ತು. ಜೆಕ್ ನ್ಯಾಯ ಸಚಿವಾಲಯದ ವಕ್ತಾರ ವ್ಲಾಡಿಮಿರ್ ರೆಪ್ಕಾ, ಯುಎಸ್ ಕೋರಿಕೆಯ ಮೇರೆಗೆ ಗುಪ್ತಾ ಅವರನ್ನು ಬಂಧಿಸಲಾಗಿದೆ, ನಂತರ ಅಮೇರಿಕಾ ಹಸ್ತಾಂತರ ಕೋರಿಕೆಯನ್ನು ಸಲ್ಲಿಸಿದೆ.

ಈ ಎಲ್ಲಾ ಆರೋಪಗಳ ತನಿಖೆಗಾಗಿ ಭಾರತ ಈಗಾಗಲೇ ತನಿಖಾ ತಂಡವನ್ನು ರಚಿಸಿದೆ.

Comments (0)
Add Comment