ಪಾಕಿಗಳು ಭಾರತದ ಅತಿದೊಡ್ಡ ಆಸ್ತಿ – ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ತಪ್ಪು “ಕೈ” ನಾಯಕ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ

ನವದೆಹಲಿ : ಪಾಕಿಸ್ತಾನಿಗಳು ಭಾರತದ ಅತಿದೊಡ್ಡ ಆಸ್ತಿ. ಅವರ ಎದುರಿಗೆ ಕುಳಿತು ಭಾರತದವರಿಗೆ ಮಾತನಾಡಲು ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್​ ನಾಯಕನ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಲಾಹೋರ್​ನ ಅಲ್ಹಮ್ರಾದಲ್ಲಿ ನಡೆದ ಫೈಜ್ ಉತ್ಸವವನ್ನು ಉದ್ಧೇಶಿಸಿ ಮಾತನಾಡಿದ್ದ ಅಯ್ಯರ್, ನನ್ನ ಅನುಭವದ ಪ್ರಕಾರ ಹೇಳಬೇಕಾದರೆ ಪಾಕಿಸ್ತಾನಿಗಳು ನಾವು ಸ್ನೇಹಪರರಾಗಿದ್ದರೆ, ಅವರು ಅತಿಯಾದ ಸ್ನೇಹಪರರು ಮತ್ತು ನಾವು ಪ್ರತಿಕೂಲರಾಗಿದ್ದೇವೆ, ಅವರು ಅತಿಯಾಗಿ ಪ್ರತಿಕೂಲರಾಗುತ್ತಾರೆ ಎಂದಿದ್ದಾರೆ.

ನಾನು ಪಾಕಿಸ್ತಾನದ ಜನರಿಗೆ ಕೇಳಿಕೊಳ್ಳುವುದೆಂದರೆ ಪಿಎಂ ಮೋದಿ ಎಂದಿಗೂ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮತಗಳನ್ನು ಪಡೆದಿಲ್ಲ. ಆದರೆ, ನಮ್ಮ ವ್ಯವಸ್ಥೆಯು ಮೂರನೇ ಒಂದು ಭಾಗದಷ್ಟು ಮತಗಳನ್ನು ಹೊಂದಿದ್ದರೆ, ಅವರು ಮೂರನೇ ಎರಡರಷ್ಟು ಮತಗಳನ್ನು ಹೊಂದಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಮೂರನೇ ಎರಡರಷ್ಟು ಭಾರತೀಯರು ಪಾಕಿಸ್ತಾನದ ಕಡೆಗೆ ಬರಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ. ಕಳೆದ 10 ವರ್ಷಗಳಲ್ಲಿ ನಾವು ಮಾಡಿದ ದೊಡ್ಡ ತಪ್ಪು ನಿಮ್ಮ ವಿರುದ್ಧ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ್ದಾರೆ. ಹೀಗಾಗಿ, ನಿಮ್ಮಮುಂದೆ ಕುಳಿತು ಮಾತನಾಡುವ ಧೈರ್ಯ ನಮಗಿಲ್ಲ ಎಂದು ಹೇಳುವ ಮೂಲಕ ಮಣಿಶಂಕರ್ ಅಯ್ಯರ್​ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

Comments (0)
Add Comment