ಪಾಕ್ ನಲ್ಲಿ ಆತ್ಮಾಹುತಿ ದಾಳಿ: ಕನಿಷ್ಟ 23 ಮಂದಿ ಸಾವು

ಇಸ್ಲಮಾಬಾದ್: ವಾಯುವ್ಯ ಪಾಕಿಸ್ತಾನದ ಸೇನಾ ಪೋಸ್ಟ್ ಮೇಲೆ ಉಗ್ರರು ನಡೆಸಿದ ಫೈರಿಂಗ್ ಮತ್ತು ಆತ್ಮಹತ್ಯಾ ಬಾಂಬ್ ದಾಳಿಯ ಪರಿಣಾಮ ಕನಿಷ್ಠ 23 ಜನರು ಹತರಾದ ಘಟನೆ ಖೈಬರ್ ಪಖ್ತುನ್ಖ ಪ್ರಾಂತ್ಯದ ಡೇರಾ ಇಸ್ಮಾಯಿಲ್ ಖಾನ್ ನಗರದಿಂದ 37 ಮೈಲಿ ದೂರವಿರುವ ದರಾಬನ್ ಪಟ್ಟಣದ ಬಳಿ ಮಂಗಳವಾರ ನಡೆದಿದೆ.

ಪಾಕಿಸ್ತಾನದಲ್ಲಿ ರೂಪುಗೊಂಡ ಭಯೋತ್ಪಾದಕ ಸಂಘಟನೆಗಳಲ್ಲಿ ಒಂದಾದ ತಾಲಿಬಾನ್ ಸಂಪರ್ಕವಿರುವ ತೆಹ್ರೀಕ್-ಎ-ಜಿಹಾದ್ ಪಾಕಿಸ್ತಾನ(ಟಿಟಿಪಿ) ಉಗ್ರಗಾಮಿ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಸೇನಾ ಪೋಸ್ಟ್ ನ ಮುಖ್ಯ ಗೇಟ್ ಗೆ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಹೊಡೆದುರುಳಿಸಿದ ಯೋಧರು, ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನಿ ಸೇನೆಯ ಮಾಧ್ಯಮ ಶಾಖೆ ತಿಳಿಸಿದೆ. ಇನ್ನು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇಡೀ ಕಟ್ಟಡದ ಕುಸಿತಗೊಂಡಿದೆ ಎಂದು ಪಾಕಿಸ್ತಾನ ಮೂಲದ ಡಾನ್ ವರದಿ ಮಾಡಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯ ಹಲವಾರು ಮಾರಣಾಂತಿಕ ದಾಳಿಗಳೊಂದಿಗೆ ಜೊತೆಗೆ ಹಿಂಸಾಚಾರದ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಜನವರಿಯಲ್ಲಿ ಪೇಶಾವರದ ಮಸೀದಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಿದಾಗ ಕನಿಷ್ಠ 101 ಮಂದಿ ಸಾವನ್ನಪ್ಪಿದ್ದರು.

ಡೇರಾ ಇಸ್ಮಾಯಿಲ್ ಖಾನ್ ನಗರವು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರಗಾಮಿ ಸಂಘಟನೆಯ ಹಿಂದಿನ ಭದ್ರಕೋಟೆಯಾಗಿದ್ದು, ಇದು ಸರ್ಕಾರವನ್ನು ಉರುಳಿಸಲು ಮತ್ತು ಪಾಕ್ ನಲ್ಲಿ ಕಠಿಣ ಧಾರ್ಮಿಕ ಕಾನೂನುಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ.

ಟಿಟ್ಪಿ, ಒಂದು ಪ್ರತ್ಯೇಕ ಉಗ್ರಗಾಮಿ ಸಂಘಟನೆ ಆದರೂ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆ ನಿಕಟ ಮೈತ್ರಿ ಹೊಂದಿದೆ.

Comments (0)
Add Comment