ಪಾಕ್​​ ವಾಯುನೆಲೆಯ ಮೇಲೆ ಉಗ್ರರ ದಾಳಿ, ವಿಮಾನ ಹೊತ್ತಿ ಉರಿಯುತ್ತಿರುವ ವಿಡಿಯೋ ವೈರಲ್

ರಾವಲ್ಪಿಂಡಿ: ಪಾಕ್ ನ ಮಿಯಾನ್‌ವಾಲಿ ತರಬೇತಿ ವಾಯುನೆಲೆಯಲ್ಲಿ ನಡೆದ ಉಗ್ರರ ದಾಳಿಯನ್ನು ಪಾಕಿಸ್ತಾನದ ವಾಯುಪಡೆ ವಿಫಲಗೊಳಿಸಿದೆ. ಈ ದಾಳಿಯಿಂದ ಮೂವರು ಪಾಕ್​​ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದೆ. ದಾಳಿಯ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ.

ಪಾಕ್‌ನ ಉಗ್ರ ಸಂಘಟನೆ ’ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ’ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಅಫ್ಘಾನ್‌ ನಿರಾಶ್ರಿತರನ್ನು ಬಲವಂತ ಹೊರ ಹಾಕುತ್ತಿರುವುದಕ್ಕೆ ದಾಳಿ ನಡೆದಿರುವುದಾಗಿ ಹೇಳಲಾಗುತ್ತಿದೆ.

ಹೆಚ್ಚು ಭದ್ರತೆ ಇದ್ದರೂ ಪಾಕಿಸ್ತಾನದ ವಾಯುನೆಲೆ ಮೇಲೆ ದಾಳಿ ಆರಂಭವಾಗುತ್ತಲೇ ಸೇನೆಯೂ ತಿರುಗೇಟು ನೀಡಿದೆ. ಸುಮಾರು 6 ಉಗ್ರರಲ್ಲಿ ಮೂವರು ಉಗ್ರರನ್ನು ಪಾಕ್‌ ಸೇನೆ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಇದಾದ ಬಳಿಕವೇ ಉಗ್ರರ ದಾಳಿ ನಿಂತಿದೆ.

ಇನ್ನು ಈ ಭಯೋತ್ಪಾದಕರು ಪಾಕಿಸ್ತಾನ ವಾಯುನೆಲೆಯ ಭಾಗದಲ್ಲಿ ಸುತ್ತುವರಿದ್ದ ಗೋಡೆಗಳಿಗೆ ಏಣಿಯನ್ನು ಬಳಸಿ ಒಳಗೆ ಬಂದಿದ್ದಾರೆ ಎಂದು ಹೇಳಲಾಗಿದೆ.

Comments (0)
Add Comment