ಪಿಂಚಣಿಗೆ ಪತಿ ಬದಲು ಮಕ್ಕಳನ್ನು ನಾಮಿನಿ ಮಾಡಲು ಮಹಿಳಾ ಉದ್ಯೋಗಿಗಳಿಗೆ ಅವಕಾಶ

ನವದೆಹಲಿ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳಿರುವ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಯೂ ತನ್ನ ಪತಿಯ ಬದಲಾಗಿ ತನ್ನ ಮಗು ಅಥವಾ ಮಕ್ಕಳನ್ನು ಕುಟುಂಬ ಪಿಂಚಣಿಗೆ ನಾಮನಿರ್ದೇಶನ ಮಾಡಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.

ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021ರ ನಿಯಮ 50ರ ಪ್ರಕಾರ, ಸರ್ಕಾರಿ ಉದ್ಯೋಗಿ ಅಥವಾ ನಿವೃತ್ತ ಸರ್ಕಾರಿ ಉದ್ಯೋಗಿ ಮರಣದ ನಂತರ ಕುಟುಂಬ ಪಿಂಚಣಿ ಮಂಜೂರು ಮಾಡಬಹುದು.

ಪ್ರಸ್ತುತ ಸರ್ಕಾರಿ ಉದ್ಯೋ ಗಿ ಮೃತಪಟ್ಟರೆ, ಕುಟುಂಬ ಪಿಂಚಣಿಯನ್ನು ಮೊದಲು ಸಂಗಾತಿಗೆ ನೀಡಲಾಗುತ್ತದೆ. ಮೃತ ಸರ್ಕಾರಿಉದ್ಯೋ ಗಿ/ಪಿಂಚಣಿದಾರರ ಸಂಗಾತಿ ಕುಟುಂಬ ಪಿಂಚಣಿಗೆ ಅನರ್ಹರಾದರೆ ಅಥವಾ ಮರಣಹೊಂದಿದರೆ, ಇತರ ಕುಟುಂಬದ ಸದಸ್ಯರು ಕುಟುಂಬ ಪಿಂಚಣಿಗೆಅರ್ಹರಾಗುತ್ತಾರೆ.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾ ಣ ಇಲಾಖೆ (DoPPW) ಈಗ ನಿಯಮಗಳಿಗೆ ತಿದ್ದುಪಡಿ ತಂದಿದೆ. ಹೀಗಾಘಿ ಇನ್ಮುಂದೆ ಮಹಿಳಾ ಉದ್ಯೋಗಿ ತನ್ನ ಮಗು ಅಥವಾ ಮಕ್ಕ ಳನ್ನು ತನ್ನ ಗಂಡನ ಬದಲು ಕುಟುಂಬ ಪಿಂಚಣಿಗಾಗಿ ನಾಮನಿರ್ದೇಶನ ಮಾಡಬಹುದಾಗಿದೆ.

Comments (0)
Add Comment