ಪಿಎಂ-ವಿಶ್ವಕರ್ಮ ಯೋಜನೆ ಅರ್ಜಿ ಆಹ್ವಾನ

 

ಹೊಸಪೇಟೆ : ಕೇಂದ್ರ ಸರ್ಕಾರದ ಪಿಎಂ-ವಿಶ್ವಕರ್ಮ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ತಿಳಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ಪಿಎಂ-ವಿಶ್ವಕರ್ಮ ಪ್ರಮಾಣ ಪತ್ರ, ಗುರುತಿನ ಚೀಟಿ, ಕೌಶಲ್ಯಾಭಿವೃದ್ಧಿ, ಉಪಕರಣಗಳಿಗೆ ಪ್ರೋತ್ಸಾಹ, ಕ್ರೆಡಿಟ್ ಸೌಲಭ್ಯ, ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ ಹಾಗೂ ಮಾರುಕಟ್ಟೆ ಬೆಂಬಲ ಸೌಲಭ್ಯ ಒದಗಿಸಲಾಗುತ್ತದೆ.

18 ರೀತಿಯ ವ್ಯಾಪಾರಗಳಲ್ಲಿ ತೊಡಗಿರುವ ಬಡಗಿ ಸೇರಿದಂತೆ ದೋಣಿ ತಯಾರಕರು, ಶಸ್ತ್ರಾಸ್ತ್ರ ತಯಾರಿಸುವವರು, ಕಮ್ಮಾರರು, ಸುತ್ತಿಗೆ ಮತ್ತು ಟೂಲ್ ಕಿಟ್ ಮಾಡುವವರು, ಬೀಗ ತಯಾರಿಸುವವರು, ಅಕ್ಕಸಾಲಿಗರು, ಕುಂಬಾರರು, ಶಿಲ್ಪಿಗಳು, ಕಲ್ಲು ಒಡೆಯುವವರು, ಚಮ್ಮಾರರು, ಮೇಸ್ತ್ರಿ, ಬುಟ್ಟಿ,ಚಾಪೆ,ಪೊರಕೆ,ಸೆಣಬು ನೇಯುವವರು, ಸಾಂಪ್ರದಾಯಿಕ ಗೊಂಬೆ ಮತ್ತು ಆಟಿಕೆ ತಯಾರಕರು, ಕ್ಷೌರಿಕರು, ಹೂ ಮಾಲೆ ತಯಾರಕರು, ಮಡಿವಾಳರು, ಟೈಲರ್, ಮೀನಿನ ಬಲೆಯ ತಯಾರಕರು.

ತರಬೇತಿ ವಿವರ:

ಕುಶಲಕರ್ಮಿಗಳಿಗೆ ನೊಂದಣಿಯಾದ ನಂತರ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ಕಾಲ ತರಬೇತಿಯನ್ನು ನೀಡಲಾಗುವುದು, ತರಬೇತಿ ಅವಧಿಯಲ್ಲಿ ಸ್ಟೆöÊಫಂಡ್ ಮತ್ತು ಇತರೆ ಭತ್ಯೆ ನೀಡಲಾಗುವುದು, ತರಬೇತಿಯ ನಂತರ ಪ್ರಮಾಣ ಪತ್ರದೊಂದಿಗೆ ರೂ. 15000/- ಬೆಲೆಬಾಳುವ ಉಪಕರಣವನ್ನು ನೀಡಲಾಗುವುದು, ಶೇ.5 ಬಡ್ಡಿದರದಲ್ಲಿ ರೂ. 1,00,000/-ಗಳನ್ನು ಸಾಲವಾಗಿ ನೀಡಲಾಗುವುದು. ನಂತರ 15 ದಿನಗಳವರೆಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಿ ಈಗಾಗಲೇ ಪಡೆದ ರೂ. 1,00,000/- ಸಾಲ ಮರುಪಾವತಿಯಾದ ನಂತರ ರೂ. 2,00,000/-ಗಳ ಸಾಲವನ್ನು ಶೇ.5ರ ಬಡ್ಡಿ ದರದಲ್ಲಿ ನೀಡಲಾಗುವುದು ಹಾಗೂ ತಾವು ತಯಾರಿಸಲ್ಪಡುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತದೆ.

ಕುಶಲಕರ್ಮಿಗಳು ಸಂಬAಧಿಸಿದ ತಮ್ಮ ಗ್ರಾಮ ಪಂಚಾಯತ್/ಪಟ್ಟಣ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ವ್ಯಾಪ್ತಿಯಲ್ಲಿ ಸ್ಥಾಪಿತವಾಗಿರುವ ಸಾಮಾನ್ಯ ಸೇವಾ ಕೇಂದ್ರ (ಅSಅ)ದಲ್ಲಿ ತ್ವರಿತವಾಗಿ ನೊಂದಣಿ ಮಾಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಪಿಎಂ-ವಿಶ್ವಕರ್ಮದ  www.pmvishwakarma.gov.in ನಲ್ಲಿ ನೋಡಬಹುದು. ಅಥವಾ ವಿಜಯನಗರ ಜಿಲ್ಲಾ ವ್ಯವಸ್ಥಾಪಕರು (ಸಿಎಸ್‌ಸಿ) ಅವರ ಮೊ.7217624098, 9902397780. ವಿಜಯನಗರ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅವರ ಮೊ.9900126430, 9449226221.

ಹೊಸಪೇಟೆ, ಹಗರಿಬೊಮ್ಮನಹಳ್ಳಿ ಕೈಗಾರಿಕಾ ವಿಸ್ತರಣಾಧಿಕಾರಿಗಳ ಅವರ ಮೊ.9035547140, ಹಡಗಲಿ, ಹರಪನಹಳ್ಳಿಯ ಕೈಗಾರಿಕಾ ವಿಸ್ತರಣಾಧಿಕಾರಿ ಅವರ ಮೊ.849694852, ಕೂಡ್ಲಿಗಿ ಮತ್ತು ಕೊಟ್ಟೂರು ಕೈಗಾರಿಕಾ ವಿಸ್ತರಣಾಧಿಕಾರಿ ಅವರ ಮೊ.9844200579, 7975556165, 9901564297, 9972040901 ಮತ್ತು 9964768334 ಸಂಪರ್ಕಿಸಬಹುದಾಗಿದೆ.

ಪಿಎಂ-ವಿಶ್ವಕರ್ಮ ಯೋಜನೆ ಅರ್ಜಿ ಆಹ್ವಾನ
Comments (0)
Add Comment