ಪೀಳಿಗೆ ಬೆಳೆಸಲು ಇಸ್ರೇಲಿಗರ ಹೊಸ ನಿರ್ಧಾರ..!

ಟೆಲ್ ಅವಿವ್ : ಇಸ್ರೇಲ್ ಹಾಗು ಹಮಾಸ್ ಉಗ್ರರ ನಡುವಿನ ಸಂಘರ್ಷದ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ.ಅಕ್ಟೋಬರ್‍ 7ಆರಂಭವಾದ ಈ ಯುದ್ಧಕ್ಕೆ ಇನ್ನೂ ಕೂಡ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

ಇದೀಗ ಇಸ್ರೇಲಿಗರು ತಮ್ಮ ಪೀಳಿಗೆ ಯನ್ನು ಮುಂದುವರಿಸಲು ಹೊಸ ದಾರಿಯೊಂದನ್ನು ಕಂಡುಕೊಂಡಿದೆ .ಯುದ್ಧದಲ್ಲಿ ಹುತಾತ್ಮರಾದ ಯೋಧರು ಮತ್ತು ನಾಗರಿಕರ ವೀರ್ಯವನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

ಅ.7ರಂದು ಹಮಾಸ್ ದಾಳಿಯಿಂದ ಮೃತಪಟ್ಟ 39 ಇಸ್ರೇಲಿ ಪುರುಷರ ವೀರ್ಯ ವನ್ನು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ದೇಶದ ಕಾನೂನಿನ ಪ್ರಕಾರ ಮೃತ ವ್ಯಕ್ತಿಯ ಪತ್ನಿ ಅಥವಾ ಪೋಷಕರು ಮೃತರ ವೀರ್ಯವನ್ನು ಸಂಗ್ರಹಿಸುವಂತೆ ಮನವಿ ಸಲ್ಲಿಸಬಹುದು. ವ್ಯಕ್ತಿಯು ಮೃತಪಟ್ಟ 24 ಗಂಟೆಯೊಳಗೆ ವೀರ್ಯ ಸಂಗ್ರ ಹಿಸಿದರೆ, ಅದು ಹೆಚ್ಚು ಫಲಪ್ರದವಾಗಲಿದೆ. ಆದರೆ ವ್ಯಕ್ತಿ ಮೃತಪಟ್ಟ ಹಲವು ದಿನಗಳ ಅನಂತರವೂ ವೀರ್ಯ ಸಂಗ್ರಹಿಸಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಕುರಿತು ರೆಹೋವೋಟ್ನ ಕಪ್ಲಾನ್ ವೈದ್ಯಕೀಯ ಕೇಂದ್ರದ ಭ್ರೂಣಶಾಸ್ತ್ರ ತಜ್ಞ ಡಾ| ಯೇಲ್ ಹರಿರ್ ಮಾಹಿತಿ ನೀಡಿದ್ದು “ಅಕ್ಟೋಬರ್ ಅನಂತರ ಮೃತ ಇಸ್ರೇಲಿ ಯೋಧರು ಮತ್ತು ನಾಗರಿಕರ ವೀರ್ಯ ಸಂಗ್ರಹಿಸುವಂತೆ ಅವರ ಕುಟುಂಬದ ವರಿಂದ ಮನವಿಗಳು ಸಲ್ಲಿಕೆಯಾಗುತ್ತಿರುವ ಸಂಖ್ಯೆ ಅಧಿಕ ವಾಗಿದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ವೀರ್ಯ ಸಂಗ್ರಹ ಮತ್ತು ಅದರ ಸಂರಕ್ಷಣೆ ಸವಾಲಿನ ವಿಷಯವಾಗಿದೆ ಎನ್ನಲಾಗಿದೆ.

 

 

Comments (0)
Add Comment