ಪೈಲಟ್‌ಗಳ ಕೊರತೆಯಿಂದ 50 ವಿಮಾನಯಾನಗಳನ್ನ ರದ್ದುಗೊಳಿಸಿದ ವಿಸ್ತಾರಾ

ಪ್ರಮುಖ ವಿಮಾನಯಾನ ಸಂಸ್ಥೆ ವಿಸ್ತಾರಾ ಪೈಲಟ್‌ಗಳ ಕೊರತೆಯನ್ನು ಎದುರಿಸುತ್ತಿದೆ. ಸಿಬ್ಬಂದಿ ಕೊರತೆಯಿಂದ ಸೋಮವಾರ 50 ವಿಮಾನಗಳನ್ನು ರದ್ದುಗೊಳಿಸಿದ್ದ ಸಂಸ್ಥೆ ಇತ್ತೀಚೆಗೆ ಮತ್ತೆ 38 ವಿಮಾನಗಳನ್ನು ರದ್ದುಗೊಳಿಸಿದೆ.

ಮಂಗಳವಾರ ಬೆಳಿಗ್ಗೆ ವಿವಿಧ ಪ್ರಮುಖ ನಗರಗಳಿಂದ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಈ ಪಟ್ಟಿಯಲ್ಲಿ ಮುಂಬೈನಿಂದ 15, ದೆಹಲಿಯಿಂದ 12 ಮತ್ತು ಬೆಂಗಳೂರಿನಿಂದ 11 ವಿಮಾನಗಳಿವೆ.

Comments (0)
Add Comment